ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಅಕ್ಟೋಬರ್ 2 ರಿಂದ 4 ರ ವರೆಗೆ ಬೆಳಿಗ್ಗೆ 9 ರಿಂದ ರಾತ್ರಿ 8 ರ ವರೆಗೆ ‘ಸಿಂಧೂರ -2026’ ಸೀರೆ ಹಾಗೂ ಆಭರಣಗಳ ಮಾರಾಟ ಮೇಳ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. 99 ರೂಪಾಯಿಂದ 99,999 ರೂಪಾಯಿ ವರೆಗಿನ ಸೀರೆಗಳು ಸಿಂಧೂರದಲ್ಲಿ ಲಭ್ಯ. ಯೋಗ್ಯ ಬೆಲೆಗೆ ಗುಣಮಟ್ಟದ ಸೀರೆಗಳು ಈ ಬಾರಿ “ಸಿಂಧೂರ” ಸಾರಿ ಮೇಳದಲ್ಲಿದೆ. ಜೊತೆಗೆ ವಿವಿಧ ನಮೂನೆಯ ಆಭರಣಗಳ ಮಾರಾಟ, ಹಪ್ಪಳ, ಸೆಂಡಿಗೆ ಜೊತೆಗೆ ತಿಂಡಿ ತಿನಿಸುಗಳ ಮಾರಾಟ, ವಿವಿಧ ಬಗೆಯ ಜನೋಪಯೋಗಿ ವಸ್ತುಗಳ ಮಾರಾಟ ಸಿಂಧೂರ ಮೇಳದಲ್ಲಿದೆ. ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.




ಮಹಿಳೆಯರಿಗೆ ಕಾಂಜೀವರಂ, ಬನಾರಸ್ , ಧರ್ಮಾವರಂ, ಪೋಚಂಪಳ್ಳಿ, ಉಪ್ಪಡ, ಟಕ್ಸರ್ ರೇಷ್ಮೆ ಸೀರೆಗಳು, ಶುದ್ಧ ಹತ್ತಿ ಕೈ ಮಗ್ಗದ ಸೀರೆಗಳು, ಜಾರ್ಜೆಟ್, ಕ್ರೇಪ್, ಷಿಫಾನ್ ಸೀರೆಗಳು ಮನಮೋಹಕ ಕಸೂತಿ ಸೀರೆಗಳು ಮತ್ತು ಫ್ಯಾನ್ಸಿ ಸೀರೆಗಳ ಬೃಹತ್ ಸಂಗ್ರಹವಿದೆ. ಅತ್ಯುತ್ತಮ ಗುಣಮಟ್ಟದ ರೇಷ್ಮೆ, ಹತ್ತಿ, ಕ್ರೇಪ್, ಪಾಲಿಸ್ಟರ್, ಸಲ್ವಾರ್ ಸೂಟ್ ಬಟ್ಟೆಗಳು, ಕುರ್ತಾಗಳು, ಕಸೂತಿ ಬ್ಯಾಗ್ಗಳು ಗೃಹಪಯೋಗಿ ವಸ್ತುಗಳು ಮತ್ತು ಚಿಕನ್ ಮಸಾಲ, ಚಿಕನ್ ಸುಕ್ಕ ಗಿರೋಸ್ಟ್ ಸಾಂಬಾರು ಇತ್ಯಾದಿ ಮಸಾಲೆ ಪುಡಿಗಳು ಲಭ್ಯವಿದೆ. ವಿವಿಧ ಮಾದರಿಯ ಒಂದು ಗ್ರಾಂ ಚಿನ್ನದ, ಪಂಚಲೋಹ ಆಭರಣಗಳು, ಚಿನ್ನದಂತೆ ಕಾಣುವ ಕಲಾತ್ಮಕ ಆಭರಣಗಳ ಆಪೂರ್ವ ಸಂಗ್ರಹವೂ ಇದೆ. ಪ್ರತೀ ವರ್ಷ ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯು ಜನರಿಗೆ ಅನುಕೂಲ ಆಗಲಿ ಎಂದು ಇಂತಹ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ. ಗ್ರಾಮಾಂತರ ಮತ್ತು ನಗರ ಪ್ರದೇಶದ ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.














































































































