ಶ್ರೀಶಂ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ನಿ) ಆದಿ ಉಡುಪಿ ಇದರ 2025 -26 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಸೆಪ್ಟೆಂಬರ್ 12 ರಂದು ಶನಿವಾರ ಆದಿ ಉಡುಪಿ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ. ಶಿವಪ್ರಸಾದ್ ಶೆಟ್ಟಿ ಮಾತನಾಡಿ, ಸಂಘವು ಎಲ್ಲಾ ಸದಸ್ಯರು, ಗ್ರಾಹಕರು, ಠೇವಣಿದಾರರು, ಆಡಳಿತ ಮಂಡಳಿಯ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಪ್ರಗತಿ ಹೊಂದುತ್ತಿದೆ. ಈ ಕಾಲಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿ ಮುಂದಿನ ದಿನಗಳಲ್ಲಿ ಗ್ರಾಹಕರಿಗಾಗಿ ಅನೇಕ ಉತ್ತಮ ಸೇವಾ ಯೋಜನೆಗಳನ್ನು ನೀಡುವ ಗುರಿ ಹೊಂದಿದೆ ಎಂದರು. ಈ ಸಂದರ್ಭದಲ್ಲಿ ಭಾಗವಹಿಸಿದ ಸಂಘದ ಮಾರ್ಗದರ್ಶಕರು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ (ನಿ) ಉಡುಪಿ ಇದರ ಅಧ್ಯಕ್ಷರಾದ ಸಹಕಾರಿ ರತ್ನ ಜಯಕರ ಶೆಟ್ಟಿ ಇಂದ್ರಾಳಿ ಅವರು ಸಂಸ್ಥೆಯು ಉಧ್ಘಾಟನೆಗೊಂಡ 7 ತಿಂಗಳಲ್ಲಿ ರೂಪಾಯಿ 3.73 ಕೋಟಿ ಠೇವಣಿ ಹೊಂದಿ ರೂಪಾಯಿ 2.33 ಕೋಟಿ ಸಾಲ ಸೌಲಭ್ಯ ನೀಡಿದ್ದು, ಈ ಪ್ರಥಮ ವರ್ಷದಲ್ಲಿನ ಈ ಉತ್ತಮ ಪ್ರಗತಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.




ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿತೇಶ್ ಕುಮಾರ್ ಶೆಟ್ಟಿ ಅವರು 2025 -26 ನೇ ಸಾಲಿನ ವಾರ್ಷಿಕ ವರದಿ ವಾಚಿಸಿ ಸಂಘದ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು. ಈ ಸಂದರ್ಭದಲ್ಲಿ ವಿಶ್ವ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಡಾl ಸೀತಾರಾಮ್ ಶೆಟ್ಟಿ ತೊಂಬತ್ತು ಕುಂದಾಪುರ, ಜಿಲ್ಲಾ ಮಟ್ಟದ ಸರ್ವೋತ್ತಮ ಪ್ರಶಸ್ತಿ ವಿಜೇತ ಪಶು ವೈದ್ಯ ಡಾ. ಸಂದೀಪ್ ಕುಮಾರ್ ಶೆಟ್ಟಿ, ಆದಿ ಉಡುಪಿ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕ ಗಣೇಶ ರಾವ್ ಅವರುಗಳನ್ನು ತಮ್ಮ ಕ್ಷೇತ್ರದಲ್ಲಿನ ಸಾಧನೆಗೆ ಗುರುತಿಸಿ ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಗಗನ ಸುಧಾಕರ್, ಕವನಾ ಎಲ್ ಶೆಟ್ಟಿ, ತೋಷಕ್ ಐ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷರಾದ ಸಂತೋಷ ಶೆಟ್ಟಿ, ನಿರ್ದೇಶಕರುಗಳಾದ ಶಂಕರ್ ಶೆಟ್ಟಿ, ನವೀನ್ ಶೆಟ್ಟಿ, ಅರುಣ್ ಶೆಟ್ಟಿ, ಸಂಜೀವ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಆನಂದ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ಭರತ್ ಶೆಟ್ಟಿ, ರಾಕೇಶ್ ಶೆಟ್ಟಿ, ಸತೀಶ್ ಶೆಟ್ಟಿ, ಅಮೃತ್ ಶೆಟ್ಟಿ, ಸ್ಮಿತಾ ವಿ ಶೆಟ್ಟಿ, ಅಶ್ವಿನಿ ವಿಜೇಶ್ ಶೆಟ್ಟಿ, ಸಲಹಾ ಸಮಿತಿಯ ಸದಸ್ಯರಾದ ಶ್ರೀಧರ ಶೆಟ್ಟಿ, ಶ್ರೀಮತಿ ವಿನೋದ ಶೆಟ್ಟಿ, ರಮೇಶ್ ಶೆಟ್ಟಿ, ಸುರೇಶ್ ಶೆಟ್ಟಿ, ಜಗದೀಶ್ ಶೆಟ್ಟಿ, ಆಸ್ತಿ ಹಾಗೂ ಕಟ್ಟಡ ಮೌಲ್ಯಮಾಪಕರಾದ ರೋಹಿತ್ ಶೆಟ್ಟಿ, ಅಭರಣ ಮೌಲ್ಯಮಾಪಕರಾದ ಕೆ.ವಿ ಶ್ರೀಪತಿ ಆಚಾರ್ಯ, ಸಿಬ್ಬಂದಿಗಳಾದ ಚಿತ್ರಾ ಶೆಟ್ಟಿ, ವಿನೀಶ್ ಶೆಟ್ಟಿ, ಪಿಗ್ಮಿ ಸಂಗ್ರಾಹಕರು, ಗ್ರಾಹಕರು, ಸಂಘದ ಸದಸ್ಯರು ಉಪಸ್ಥಿತರಿದ್ದರು. ಸುಮಿತ್ರಾ ಶೆಟ್ಟಿ ಜನ್ನಿಬೆಟ್ಟು ಪ್ರಾರ್ಥನೆಗೈದರು. ನಿರ್ದೇಶಕ ಅಮೃತ್ ಶೆಟ್ಟಿ ಸ್ವಾಗತಿಸಿ, ನಿರ್ದೇಶಕ ಸ್ಮಿತಾ ವಿ ಶೆಟ್ಟಿ ವಂದಿಸಿ, ಸುರೇಶ್ ಶೆಟ್ಟಿ ನಿರೂಪಿಸಿದರು.














































































































