ಪುಣೆಯ ಬಂಟ ಸಮಾಜದ ಪ್ರತಿಷ್ಟಿತ ಸಂಸ್ಥೆಗಳಲ್ಲೊಂದಾದ ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ನೂತನ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ, ಸಮಾಜ ಸೇವಕ ಸತೀಶ್ ರೈ ಕಲ್ಲಂಗಳ ಗುತ್ತುರವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಭವ್ಯರಾಣಿ ಎಸ್ ಶೆಟ್ಟಿಯವರು ಆಯ್ಕೆಯಾದರು. ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 12 ರಂದು ಪುಣೆಯ ಕ್ಯಾಂಪ್ ನಲ್ಲಿರುವ ಲೇಡೀಸ್ ಕ್ಲಬ್ ನ ಬ್ಯಾಂಕ್ವೇಟ್ ಹಾಲ್ ನಲ್ಲಿ ಜರಗಿತು. ಈ ಸಂದರ್ಭದಲ್ಲಿ 2026 – 28 ರ ಸಾಲಿಗೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರನ್ನಾಗಿ ಸತೀಶ್ ರೈಯವರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರುಗಳಾಗಿ ದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ, ಪ್ರದೀಪ್ ಶೆಟ್ಟಿ, ಕಾರ್ಯದರ್ಶಿಯಾಗಿ ರಕ್ಷಿತ್ ಶೆಟ್ಟಿ, ಕೋಶಾಧಿಕಾರಿಯಾಗಿ ಸಿಎ ಮನೋಹರ್ ಶೆಟ್ಟಿ, ಜೊತೆ ಕಾರ್ಯದರ್ಶಿ ಮತ್ತು ಜನ ಸಂಪರ್ಕಾಧಿಕಾರಿಯಾಗಿ ರವಿ ಶೆಟ್ಟಿ, ಜೊತೆ ಕೋಶಾಧಿಕಾರಿಯಾಗಿ ಯಶವಂತ್ ಶೆಟ್ಟಿ, ಮಾಧ್ಯಮ ಮತ್ತು ಸಂವಹನ ಕಾರ್ಯಾಧ್ಯಕ್ಷರಾಗಿ ಮಹೇಶ್ ಹೆಗ್ಡೆ ಪೊಳಲಿ, ಸಾಂಸ್ಕ್ರತಿಕ ಕಾರ್ಯಾಧ್ಯಕ್ಷರಾಗಿ ತಾರಾನಾಥ್ ರೈ ಸೂರಂಬೈಲು, ಕ್ರೀಡಾ ಕಾರ್ಯಾಧ್ಯಕ್ಷರಾಗಿ ಸುರೇಶ್ ಶೆಟ್ಟಿ ಗಂಟಿಹೊಳೆ, ಜೊತೆ ಕ್ರೀಡಾ ಕಾರ್ಯಾಧ್ಯಕ್ಷರಾಗಿ ಅಶೋಕ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ಪ್ರಮೋದ್ ರೈ, ಯುವ ಕಾರ್ಯದರ್ಶಿಯಾಗಿ ಆಯುಶ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.




ಮಹಿಳಾ ವಿಭಾಗದ ಕಾರ್ಯದರ್ಶಿಯಾಗಿ ಶಾಲಿನಿ ಎಂ ಶೆಟ್ಟಿ, ಕೋಶಾಧಿಕಾರಿಯಾಗಿ ಸೌಮ್ಯ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಪೂರ್ಣಿಮಾ ಎ ಶೆಟ್ಟಿ, ಸಾಂಸ್ಕ್ರತಿಕ ಕಾರ್ಯಾಧ್ಯಕ್ಷೆಯಾಗಿ ಸುಜಾತ ಎ ಶೆಟ್ಟಿ, ಸಾಂಸ್ಕ್ರತಿಕ ಜೊತೆ ಕಾರ್ಯದಶಿಯಾಗಿ ರೂಪಾ ಶೆಟ್ಟಿ, ಕ್ರೀಡಾ ಕಾರ್ಯಾಧ್ಯಕ್ಷೆಯಾಗಿ ಶೈಲಜಾ ಶೆಟ್ಟಿ, ಸಮಿತಿ ಸದಸ್ಯರಾಗಿ ಶರ್ಮಿಳಾ ಟಿ ರೈ, ಪ್ರತಿಮಾ ಶೆಟ್ಟಿ, ಶಶಿಕಲಾ ಶೆಟ್ಟಿ, ಸೋನಿಕಾ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ್ ರೈಯವರಿಗೆ ನಿರ್ಗಮನ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿಗುತ್ತುರವರು ಶಾಲು, ಪುಷ್ಪಗುಚ್ಚ ನೀಡಿ ಅಭಿನಂದಿಸಿ ಗೌರವಿಸಿದರು. ಮಹಿಳಾ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಯಾದ ಭವ್ಯರಾಣಿ ಶೆಟ್ಟಿಯವರಿಗೆ ನಿರ್ಗಮನ ಕಾರ್ಯಾಧ್ಯಕ್ಷೆ ರೇಷ್ಮಾ ಶೆಟ್ಟಿಯವರು ಶಾಲು, ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ಚಿತ್ರ, ವರದಿ : ಹರೀಶ್ ಮೂಡುಬಿದ್ರಿ, ಪುಣೆ












































































































