
ನಿಡ್ಡೋಡಿ ಚಾವಡಿ ಮನೆ ಡಾ| ಜಗನ್ನಾಥ ಶೆಟ್ಟಿಯವರ ಸಾರಥ್ಯದ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ (ರಿ) ಕಿನ್ನಿಗೋಳಿ ಇವರಿಂದ ಸೆಪ್ಟೆಂಬರ್ 17 ರಂದು ದೇಶದ ಪ್ರಧಾನಿ ಆದರಣೀಯ ಶ್ರೀ ನರೇಂದ್ರ ಮೋದೀಜಿ ಅವರ ಜನುಮ ದಿನ ಪ್ರಯುಕ್ತ ಸದ್ರಿ ಸಂಸ್ಥೆ ವತಿಯಿಂದ ಭಿನ್ನ ಸಾಮರ್ಥ್ಯದ ಮಕ್ಕಳ ಜೊತೆ ಜನುಮ ದಿನ ಉತ್ಸವ ಆಚರಿಸಿಕೊಳ್ಳಲಿದೆ. ಎಂ.ಸಿ.ಎಸ್ ಬ್ಯಾಂಕ್ ಲಿ ಅಧ್ಯಕ್ಷ ಎಂ ಬಾಹುಬಲಿ ಪ್ರಸಾದ್ ಇವರು ಕಾರ್ಯಕ್ರಮ ಉದ್ಘಟಿಸಲಿದ್ದು, ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಡಾ| ಜಗನ್ನಾಥ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಿಗ್ಗೆ 10.30 ಕ್ಕೆ ಬೆಳುವಾಯಿಯ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಇಲ್ಲಿ ಆಯೋಜಿಸಲ್ಪಡುವ ಕಾರ್ಯಕ್ರಮದಲ್ಲಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಬೆಳುವಾಯಿ ಇಲ್ಲಿನ ಅಧ್ಯಕ್ಷ ಪ್ರಕಾಶ್ ಜಿ ಶೆಟ್ಟಿಗಾರ್ ಇವರ ಘನ ಉಪಸ್ಥಿತಿಯಲ್ಲಿ ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಭಾಸ್ಕರ್ ದೇವಸ್ಯ, ಸುರೇಶ್ ಜಿ ಪೂಜಾರಿ ಮಾಜಿ, ರತ್ನಾಕರ ಶೆಟ್ಟಿ ಖಂಡಿಗೆ, ಭಾಸ್ಕರ್ ಆಚಾರ್ಯ ಮೊದಲಾದ ಗಣ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಕ್ಕಳ ಪೋಷಕರ ಕಡ್ಡಾಯ ಉಪಸ್ಥಿತಿಯನ್ನು ಕೋರಲಾಗಿದ್ದು, ದೇಶದ ಪ್ರಧಾನಿ ಅವರನ್ನು ಗೌರವಿಸುವ ಜೊತೆಗೆ ಭಿನ್ನ ಸಾಮರ್ಥ್ಯದ ಮಕ್ಕಳ ಜೊತೆ ಕೂಡಿಕೊಂಡು ಅವರಲ್ಲಿ ಆತ್ಮ ವಿಶ್ವಾಸ ಮೂಡಿಸುವಲ್ಲಿ ಕಾರ್ಯಕ್ರಮ ಮಹತ್ವ ಪೂರ್ಣವಾಗಿದೆ ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.















































































































