ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಹಿರಿಯ ನಿವೃತ್ತ ಶಿಕ್ಷಕರಾದ ಎನ್.ಜಿ ಶ್ರೀನಿವಾಸ್ ರೈ ಪಟ್ಟೆಯವರಿಗೆ ಗೌರವಾರ್ಪಣೆಯು ಸೆಪ್ಟೆಂಬರ್ 5 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಅಧ್ಯಕ್ಷರಾದ ಲಯನ್ ಕುಂಬ್ರ ದಯಾಕರ ಆಳ್ವ ವಹಿಸಿ, ಸನ್ಮಾನಿಸಿ ಶುಭ ಹಾರೈಸಿದರು. ಎನ್.ಜಿ ಶ್ರೀನಿವಾಸ ರೈಯವರನ್ನು ಗೌರವಿಸುವ ಸಂದರ್ಭದಲ್ಲಿ ಕ್ಲಬ್ ನ ಕಾರ್ಯದರ್ಶಿ ಲಯನ್ ಪ್ರದೀಪ್ ಕುಮಾರ್ ರೈ ಪಾಂಬಾರು, ಯತೀಶ್ ಭಂಡಾರಿ, ಸದಸ್ಯರುಗಳಾದ ಲಯನ್ ಚಿದಾನಂದ ರೈ ನೆಲ್ಯಾಜೆ, ಲಯನ್ ರಮಾನಂದ ರೈ, ಲಯನ್ ಜಯಪ್ರಕಾಶ್ ಅಲೆಕ್ಕಾಡಿ, ಲಯನ್ ಉಮೇಶ್ ರೈ ಮರುವಂಜ ಉಪಸ್ಥಿತರಿದ್ದರು. ಕ್ಲಬ್ ನ ಕೋಶಾಧಿಕಾರಿ ಲಯನ್ ಈಶ್ವರ ವಾರಣಾಶಿ ಸ್ವಾಗತಿಸಿದರು. ಸುಜಿತ್ ರೈ ಪಟ್ಟೆ ವಂದಿಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸ ರೈಯವರ ಪತ್ನಿ ಚಿತ್ರಲತಾ ಎಸ್. ರೈ, ಸಹೋದರ ಕೇರ್ಪಡ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎನ್.ಜಿ ಲೋಕನಾಥ್ ರೈ ಉಪಸ್ಥಿತರಿದ್ದರು.















































































































