ಕಲಿಯುಗದ ಕಾಮಧೇನು ಗುರುರಾಯರ ಆಶೀರ್ವಾದಿಂದ ಹಾಗೂ ಬೆಂಗಳೂರಿನ ಶಂಕರ್ ಎಲೆಕ್ಟ್ರಿಕಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಎಂಡಿ ಶ್ರೀ ರಾಜೇಶ್ ಆರ್ ಶೆಟ್ಟಿಯವರ ಸಂಪೂರ್ಣ ಸಹಕಾರದೊಂದಿಗೆ ‘ಬಂಟ್ಸ್ ಟುಡೇ’ ಮಾಧ್ಯಮ ಸಂಸ್ಥೆಯು ಕಾರ್ಯಾರಂಭದ ಹಂತಕ್ಕೆ ತಲುಪಿದೆ. ಆತ್ಮೀಯರಾದ ‘ಓ ಬೊನೋಬೋ’ ಸಂಸ್ಥೆಯ ಅರ್ಜುನ್ ರಾಜ್ ರವರು ‘ಬಂಟ್ಸ್ ಟುಡೇ’ ಲೋಗೋಗೆ ಜೀವಕಲೆ ನೀಡಿದ್ದಾರೆ. ರಾಯರ ಆಶೀರ್ವಾದ ಎಂಬಂತೆ ಸೆಪ್ಟೆಂಬರ್ 08 ರಂದು ಮಂತ್ರಾಲಯದ ಗುರುಗಳಾದ ಶ್ರೀ ಶ್ರೀ ಸುಬುಧೇಂದ್ರ ತೀರ್ಥರ ಕರಕಮಲಗಳಿಂದ “ಬಂಟ್ಸ್ ಟುಡೇ” ಮಾಧ್ಯಮ ಸಂಸ್ಥೆಯ ಲೋಗೋ ಪರಮ ಪವಿತ್ರ ರಾಯರ ಸನ್ನಿಧಾನದಲ್ಲಿ ಬಿಡುಗಡೆಗೊಳ್ಳಲಿದೆ. ಬಂಟ ಬಾಂಧವರು ಎಂದಿನಂತೆ ಪ್ರೀತಿಯಿಟ್ಟು ಹರಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ.


















































































































