ಉದ್ಯಮಿ, ಸಾಹಿತಿ, ಸಂಘಟಕ, ಸಮಾಜ ಸೇವಕ ಶ್ರೀ ಡಿ.ಕೆ ಶೆಟ್ಟಿ ಒಡೆತನದ ‘ಇನ್ನಾ ಸೆಕ್ಯುರಿಟಿ ಎಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ ಲಿಮಿಟೆಡ್’ ಇಂದು ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದ್ದು, ಅನೇಕ ಪ್ರತಿಷ್ಠಿತ ಕಂಪನಿ, ಆಸ್ಪತ್ರೆ, ಕೈಗಾರಿಕೋದ್ಯಮ, ಶಿಕ್ಷಣ ಸಂಸ್ಥೆಗಳು ಹಾಗೂ ವಾಸ್ತವ್ಯ ವ್ಯಾಪಾರ ಸಂಕೀರ್ಣ ಇತ್ಯಾದಿಗಳಿಗೆ ಮಾನವ ಸಂಪನ್ಮೂಲ ಭದ್ರತೆ ಸೆಕ್ಯೂರಿಟಿ ಗಾರ್ಡ್ ಸೇವೆ ಜೊತೆ ಜೊತೆಗೆ ಹಾಸ್ಪಿಟಾಲಿಟಿ ಉದ್ಯಮದಲ್ಲಿ ಯಶಸ್ಸನ್ನು ಗಳಿಸಿಗೊಂಡಿದೆ. ಮುಂಬಯಿ ಮೂಲದ ಈ ಖಾಸಗಿ ಸಂಸ್ಥೆ ಕರ್ನಾಟಕದಲ್ಲಿ ಮಂಗಳೂರಿನ ಸುರತ್ಕಲ್ ನಲ್ಲಿ ಶಾಖೆಯನ್ನು ಹೊಂದಿದೆ. ಇವರ ಸುರಕ್ಷಾ ವ್ಯವಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದ್ದು ಯಾವ ಕಾರಣಕ್ಕೂ ಫಲಾನುಭವಿಗಳಿಗೆ ನಷ್ಟವಾಗದಂತೆ ಕಾಳಜಿ ವಹಿಸುತ್ತದೆ. ಆಧುನಿಕ ಶೈಲಿಯ ಅತ್ಯುತ್ತಮ ತರಬೇತಿ ಪಡೆದ ಆಕರ್ಷಣೀಯ ಸಮವಸ್ತ್ರ ಹೊಂದಿದ ಸೆಕ್ಯೂರಿಟಿ ಗಾರ್ಡ್ ಗಳು ಸರ್ವಕಾಲಕ್ಕೆ ಉಪಲಬ್ಧರಿರುತ್ತಾರೆ.




ಡಿ.ಕೆ ಶೆಟ್ಟಿಯವರ ಸುಪುತ್ರ ರೋಹಿತ್ ಶೆಟ್ಟಿ ಹಾಗೂ ವಿವಿಧ ವಿಭಾಗಗಳ ಪ್ರಮುಖ ಸಿಬ್ಬಂದಿಗಳು ಇದರ ಆಡಳಿತ ನಿರ್ವಹಿಸಲು ಸಹಾಯ ಮಾಡುತ್ತಾರೆ. ಕ್ಯಾಟರಿಂಗ್ ಸೇವೆಯಲ್ಲಿ ಕಾರ್ಪೋರೇಟ್ ಕ್ಯಾಟರಿಂಗ್, ಔಟ್ ಡೋರ್ ಕ್ಯಾಟರಿಂಗ್, ಸ್ಕೂಲ್ ಕ್ಯಾಟರಿಂಗ್, ಹಾಸ್ಪಿಟಲ್ ಕ್ಯಾಟರಿಂಗ್ ಲಭ್ಯವಿದ್ದು, ಇವರು ಶುಚಿತ್ವ ಮತ್ತು ಆರೋಗ್ಯ ವಿಷಯಕ್ಕೆ ಮಹತ್ವ ನೀಡುತ್ತಿದ್ದು ಗ್ರಾಹಕರ ಸಂಖ್ಯೆ ವೃದ್ಧಿಯಾಗುತ್ತಲೇ ಇದೆ. ನಗರದ ಪ್ರತಿಷ್ಠಿತ ಕಂಪನಿಗಳಿಗೆ ಮಾನವ ಸಂಪನ್ಮೂಲ ಹಾಗೂ ಭದ್ರತಾ ಸೇವೆ ನೀಡುತ್ತಲೇ ಕ್ಯಾಟರಿಂಗ್ ಉದ್ದಿಮೆಯೂ ಪ್ರಗತಿಯಲ್ಲಿದೆ. ಡಿ.ಕೆ ಶೆಟ್ಟಿ ಅವರು ಜನಪ್ರಿಯ ಸಂಘಟಕರು ಸಮಾಜ ಸೇವಕರು. ಅನೇಕ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಜನತೆಗೆ ಚಿರಪರಿಚಿತರು. ಇದು ಅವರ ಉದ್ಯಮದ ಪ್ರಗತಿಗೆ ಮುಖ್ಯ ಕಾರಣವೂ ಹೌದು. ಇವರ ಸಂಸ್ಥೆಯು ಸರ್ವಾಂಗೀಣ ಭದ್ರತಾ ವ್ಯವಸ್ಥೆಯ ಸೇವೆಯನ್ನು ಹೊಂದಿದ್ದು, ಒಂದೇ ಸೂರಿನಡಿ ಭದ್ರತೆ ಕುರಿತ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹಾಗೂ ಅಮೂಲ್ಯ ಸಲಹೆಗಳಿವೆ.



ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿ ನಡೆಸುವ ಉದ್ಯಮಿಗಳ ವಿಶ್ವಾಸ ಗೆಲ್ಲುವ ಕೆಲಸದಲ್ಲಿ ಇನ್ನಾ ಸೆಕ್ಯುರಿಟಿ ಸರ್ವಿಸಸ್ ಹಿಂದೆ ಉಳಿದಿಲ್ಲ ಎಂಬ ಕಾರಣದಿಂದಲೇ ಈ ವ್ಯವಹಾರ ಎಲ್ಲರ ವಿಶ್ವಾಸ ಗಳಿಸಿ ಪ್ರಗತಿ ಪಥದಲ್ಲಿದೆ. ಮುಂಬರುವ ವರ್ಷಗಳಲ್ಲಿ ಇದು ಮುಂಬಯಿ ಸೇರಿದಂತೆ ಪರಿಸರದ ಉಪನಗರ ಅಷ್ಟೇ ಅಲ್ಲ ಕರ್ನಾಟಕ ತನಕವೂ ವ್ಯಾಪಕವಾಗಿ ವಿಸ್ತಾರಗೊಳ್ಳಲಿದೆ. ಒಬ್ಬ ಸಾಮಾಜಿಕ ಕಳಕಳಿಯ ಸಮಾಜ ಬಾಂಧವರ ಉದ್ಯಮ ಪ್ರಗತಿ ಪಥದಲ್ಲಿ ಮುನ್ನಡೆಯಲೆಂದು ಬಂಟ್ಸ್ ನೌ ಮಾದ್ಯಮ ಸಂಸ್ಥೆ ಶುಭ ಹಾರೈಸುತ್ತದೆ.















































































































