ನೆಲ್ಯಾಡಿ ವಲಯ ಬಂಟರ ಸಂಘದ ಮಹಾಸಭೆ ನೆಲ್ಯಾಡಿ ಹಾಲು ಉತ್ಪಾದಕರ ಸಂಘದ ಕ್ಷೀರ ಸಂಗಮ ಸಭಾಂಗಣದಲ್ಲಿ ನಡೆಯಿತು. ಪ್ರತಾಪ್ ಚಂದ್ರ ರೈ ಕುದ್ಮಾರು ಗುತ್ತು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಗೌರವಾಧ್ಯಕ್ಷರಾಗಿ ಸುಂದರ ಶೆಟ್ಟಿ ಪುರ, ಅಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಶ್ರೀ ಮಾತಾ, ಕಾರ್ಯದರ್ಶಿಯಾಗಿ ಅನಿಲ್ ರೈ ಹಾರ್ಪಳ, ಕೋಶಾಧಿಕಾರಿಯಾಗಿ ಪ್ರವೀಣ್ ಭಂಡಾರಿ ಪುರ, ಉಪಾಧ್ಯಕ್ಷರಾಗಿ ಯಾದವ ಶೆಟ್ಟಿ ರಾಮನಗರ, ಜಯಾನಂದ ಶೆಟ್ಟಿ ಸೌಜನ್ಯ, ಐತಪ್ಪ ಶೆಟ್ಟಿ ಡೆಮ್ಮೆಜಾಲು ಹಾಗೂ ವಿನೋದ್ ಶೆಟ್ಟಿ ಬಾಕಿಜಾಲು ಆಯ್ಕೆಯಾದರು. ಸಹ ಕಾರ್ಯದರ್ಶಿಗಳಾಗಿ ವಿಶಾಲಾಕ್ಷಿ ಕಡಂಬಿಲ ಹಾಗೂ ಅಮಿತಾ ಕಂಚಿನಡ್ಕ ಅವರನ್ನು ಆಯ್ಕೆ ಮಾಡಲಾಯಿತು.




ಸಂಚಾಲಕರಾಗಿ ಪ್ರತಾಪ್ ಚಂದ್ರ ರೈ ಕುದ್ಮಾರು ಗುತ್ತು, ಸಹ ಸಂಚಾಲಕರಾಗಿ ರಮೇಶ್ ಶೆಟ್ಟಿ ಬೀದಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ ಪದ್ಮನಾಭ ಶೆಟ್ಟಿ, ಜಗನ್ನಾಥ ರೈ ಆರಂತಬೈಲು ಪಾದೆ, ಭಾಸ್ಕರ ರೈ ತೋಟ, ಪ್ರತೀಕ್ಷ್ ರೈ ಕೊಂಜಾಲುಗುತ್ತು, ಜೀವಿತಾ ಚಂದ್ರಶೇಖರ್ ಶೆಟ್ಟಿ ಗೋಳಿತ್ತೊಟ್ಟು, ಮಹಾಬಲ ಶೆಟ್ಟಿ ದೊಂತಿಲ, ರವಿಪ್ರಸಾದ್ ಶೆಟ್ಟಿ ಕೂರಟ, ಬಾಲಕೃಷ್ಣ ರೈ ಗುತ್ತು, ಚಂದ್ರಶೇಖರ್ ರೈ ರಾಮನಗರ, ರೇಷ್ಮಾ ಶೆಟ್ಟಿ ಗುತ್ತು, ಗಿರೀಶ್ ಶೆಟ್ಟಿ ಬೀದಿ, ಚಂದ್ರಶೇಖರ್ ಶೆಟ್ಟಿ ಪಟ್ಟೆ, ಪ್ರಹ್ಲಾದ್ ಶೆಟ್ಟಿ ಕೊಲ್ಯೊಟ್ಟು, ನಮಿತಾ ಶೆಟ್ಟಿ ನಡುಪರಾರಿ ಹಾಗೂ ನಿತ್ಯಾನಂದ ಶೆಟ್ಟಿ ಮನವಳಿಕೆ ಆಯ್ಕೆಯಾದರು.














































































































