ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ 2026 -28 ನೇ ಸಾಲಿಗೆ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದವರಿಗೆ ಪದ ಪ್ರದಾನ ಸಮಾರಂಭ ಅಗಸ್ಟ್ 9 ರಂದು ನಡೆಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಮಿತಿಯ ಸಂಚಾಲಕರಾದ ಕಾವ್ರಾಡಿ ಸಂಪತ್ ಕುಮಾರ್ ಶೆಟ್ಟಿಯವರು ಪದಪ್ರದಾನ ನೆರವೇರಿಸಿದರು. ಗೌರವಾಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ಶೇರ್ಡಿ ಗೈನಾಡಿಮನೆ, ಅಧ್ಯಕ್ಷರಾಗಿ ಡಾ| ಚೇತನ್ ಶೆಟ್ಟಿ ಕೋವಾಡಿ, ಕಾರ್ಯದರ್ಶಿಯಾಗಿ ಪ್ರವೀಣ್ ಶೆಟ್ಟಿ ಹರ್ಕೂರು, ಕೋಶಾಧಿಕಾರಿಯಾಗಿ ಅರುಣ್ ಶೆಟ್ಟಿ ಕುಂದಾಪುರ ಸೇರಿದಂತೆ ಒಟ್ಟು 48 ಮಂದಿ ಪದಪ್ರದಾನ ಸ್ವೀಕರಿಸಿದರು. ಸಂಘದ ನಿಕಟಪೂರ್ವ ಅಧ್ಯಕ್ಷ ನಿತೇಶ್ ಶೆಟ್ಟಿ ಬಸ್ರೂರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸಂಘದ ಗೌರವಾಧ್ಯಕ್ಷರಾದ ವತ್ಸಲಾ ದಯಾನಂದ ಶೆಟ್ಟಿ, ಸಂಘದ ಮಹಾನಿರ್ದೇಶಕರಾದ ಎಸ್ .ಎಸ್ ಹೆಗ್ಡೆ , ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಬಿ ಉದಯ್ ಕುಮಾರ್ ಶೆಟ್ಟಿ, ದಯಾನಂದ ಶೆಟ್ಟಿ, ಸಂಘದ ನಿರ್ದೇಶಕರಾದ ಡಾ. ರಂಜಿತ್ ಕುಮಾರ್ ಶೆಟ್ಟಿ, ಬಿ. ವಿನಯ್ ಕುಮಾರ್ ಶೆಟ್ಟಿ, ಸಟ್ವಾಡಿ ವಿಜಯ ಶೆಟ್ಟಿ, ಪೋಷಕರಾದ ಪಿ. ಸುಧಾಕರ್ ಶೆಟ್ಟಿ, ದಿವಾಕರ ಶೆಟ್ಟಿ ಭದ್ರಾವತಿ, ಗಿಳಿಯಾರು ಶ್ರೀಧರ್ ಶೆಟ್ಟಿ, ಕೊಂಡಳ್ಳಿ ಜಯಕರ ಶೆಟ್ಟಿ, ಇಂದ್ರಾಳಿ ಜಯಕರ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ ಗುಡ್ಡಮ್ಮಾಡಿ, ಎ.ಬಿ ಶೆಟ್ಟಿ, ಆವರ್ಸೆ ಸುಧಾಕರ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ ಕಟ್ಕೇರಿ, ಟಿ.ಬಿ ಶೆಟ್ಟಿ, ಮಹೇಶ್ ಹೆಗ್ಡೆ ಮೊಳಹಳ್ಳಿ, ಹುoತ್ರಿಕೆ ಸುಧಾಕರ ಶೆಟ್ಟಿ, ಜಯಶೀಲ ಶೆಟ್ಟಿ, ವಿಜಯಾನಂದ ಶೆಟ್ಟಿ ಹಳ್ನಾಡು, ಗೋಕುಲ್ ಶೆಟ್ಟಿ ಉಪ್ಪುಂದ, ಜಡ್ಡಾಡಿ ವಿಜಯ್ ಕುಮಾರ್ ಶೆಟ್ಟಿ, ಹಳ್ನಾಡು ಜಯರಾಮ ಶೆಟ್ಟಿ, ಜಗದೀಶ ಶೆಟ್ಟಿ ಕುದ್ರುಕೋಡು, ಕೆದೂರು ಜಯರಾಮ ಶೆಟ್ಟಿ, ಹಂಸರಾಜ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ ಶಿರೂರು, ಹೈದರಾಬಾದ್ ಉದ್ಯಮಿಗಳಾದ ಎಚ್ ಚಂದ್ರ ಶೆಟ್ಟಿ, ಜಯರಾಮ ಶೆಟ್ಟಿ, ಹೊಸೂರು ಚಂದ್ರಶೇಖರ್ ಶೆಟ್ಟಿ, ಸಲ್ವಾಡಿ ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿದ್ದರು.









ಈ ಸಂದರ್ಭ ಡಾ| ಮಧುಕರ ಶೆಟ್ಟಿ ಐಪಿಎಸ್ ಸಂಸ್ಮರಣ ಪ್ರಶಸ್ತಿ ಸೇರಿದಂತೆ ಐದು ಸಂಸ್ಮರಣ ಪ್ರಶಸ್ತಿಗಳ ಪ್ರದಾನ, 400 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ‘ವಿದ್ಯಾ ದೀವಿಗೆ’ ಮತ್ತು ಪ್ರತಿಭಾ ಪುರಸ್ಕಾರ ನಡೆಯಿತು. ಸಂಘದ ಸ್ಥಾಪಕ ಅಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿ ಸ್ವಾಗತಿಸಿ, ಪ್ರತಾಪ್ ಚಂದ್ರ ಶೆಟ್ಟಿ ಹಳ್ನಾಡು ಪ್ರಸ್ತಾವಿಸಿ, ಪ್ರದೀಪ್ ಶೆಟ್ಟಿ ಕಾರಿಕಟ್ಟೆ ವoದಿಸಿ, ಸಚಿನ್ ಕುಮಾರ್ ಶೆಟ್ಟಿ ಹುoಚನಿ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಿಕಾಂತ್ ಶೆಟ್ಟಿ ಪ್ರಾರ್ಥಿಸಿದರು.























































































































