ಇದೇ ಬರುವ ಆಗಸ್ಟ್ 9ರಂದು ಭಾನುವಾರ ಬಂಟರ ಸಂಘ ಬಂಟ್ವಾಳ ಬಿ.ಸಿ ರೋಡು ವಲಯದಿಂದ ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸಹಯೋಗದಲ್ಲಿ ರಂಗೋಲಿ ಹೋಟೇಲಿನ ಸಭಾಂಗಣದಲ್ಲಿ ‘ಆಟಿದ ಕೂಟ’ ಕಾರ್ಯಕ್ರಮವು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಸಭೆಯ ಅಧ್ಯಕ್ಷತೆಯನ್ನು ಶಂಕರ ಶೆಟ್ಟಿ ನಡ್ಯೋಡಿಗುತ್ತು ಅವರು ವಹಿಸಲಿದ್ದಾರೆ. ಹಿರಿಯ ಕೃಷಿಕರು ಶ್ರೀ ಮಂಜಯ್ಯ ಶೆಟ್ಟಿ ನುಂಗೂರು ಗುತ್ತು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸುತ್ತಾರೆ. ಉಳಿದಂತೆ ಮುಖ್ಯ ಅತಿಥಿಗಳಾಗಿ ಉಳಿಪಾಡಿ ಗುತ್ತು ರಾಜೇಶ್ ನಾಯ್ಕ್ ಮಾನ್ಯ ಶಾಸಕರು ಬಂಟ್ವಾಳ ವಿಧಾನಸಭಾ ಕ್ಷೇತ್ರ, ಬೆಳ್ಳಿಪಾಡಿ ರಮಾನಾಥ ರೈ ಮಾಜಿ ಸಚಿವರು ಕರ್ನಾಟಕ ಸರಕಾರ, ಜಗನ್ನಾಥ ಚೌಟ ಬದಿಗುಡ್ಡೆ ಅಧ್ಯಕ್ಷರು ಬಂಟರ ಸಂಘ ಬಂಟ್ವಾಳ ತಾಲೂಕು, ಐತಪ್ಪ ಆಳ್ವ ಸುಜೀರು ಗುತ್ತು ಉಪಾಧ್ಯಕ್ಷರು ಬಂಟರ ಸಂಘ ಬಂಟ್ವಾಳ ತಾಲೂಕು, ಸದಾನಂದ ಆಳ್ವ ಕಂಪ ಕಾರ್ಯದರ್ಶಿ ಬಂಟರ ಸಂಘ ಬಂಟ್ವಾಳ ತಾಲೂಕು, ಶ್ರೀಮತಿ ವಿಂದ್ಯಾ ಸುಂದರ ರೈ ಕುರುಂಬ್ಲಾಜೆ ಗುತ್ತು ಜಿಲ್ಲಾಧ್ಯಕ್ಷರು ಆಮಂತ್ರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿರುವರು.



ಆದೇ ರೀತಿ ವಿಶೇಷ ಆಹ್ವಾನಿತರಾಗಿ ಚಂದ್ರಹಾಸ ಡಿ ಶೆಟ್ಟಿ ನಿಕಟಪೂರ್ವ ಅಧ್ಯಕ್ಷರು ಬಂಟರ ಸಂಘ ಬಂಟ್ವಾಳ ತಾಲೂಕು ಹಾಗೂ ಜತೆ ಕಾರ್ಯದರ್ಶಿ ಜಾಗತಿಕ ಬಂಟರ ಒಕ್ಕೂಟ, ಲೋಕೇಶ್ ಶೆಟ್ಟಿ ಕುಳ ಕೋಶಾಧಿಕಾರಿ ಬಂಟರ ಸಂಘ ಬಂಟ್ವಾಳ, ಶಿವಪ್ರಸಾದ ಶೆಟ್ಟಿ ಸಜಿಪ ಜತೆ ಕಾರ್ಯದರ್ಶಿ ಬಂಟರ ಸಂಘ ಬಂಟ್ವಾಳ, ಶ್ರೀಮತಿ ವಿದ್ಯಾ ಎ ರೈ ಜೊತೆ ಕೋಶಾಧಿಕಾರಿ ಬಂಟರ ಸಂಘ ಬಂಟ್ವಾಳ, ಶ್ರೀಮತಿ ಸುಜಾತಾ ಪಿ ರೈ ಕಲ್ಲಡ್ಕ ಅಧ್ಯಕ್ಷರು ಮಹಿಳಾ ವಿಭಾಗ ಬಂಟರ ಸಂಘ ಬಂಟ್ವಾಳ, ಗೋಕುಲ್ ಭಂಡಾರಿ ಬಿಜಂದೂರು ಗುತ್ತು ಅಧ್ಯಕ್ಷರು ಯುವ ವಿಭಾಗ ಬಂಟರ ಸಂಘ ಬಂಟ್ವಾಳ ಮೊದಲಾದವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆ ತಂಡಗಳಿಗೆ ಮತ್ತು ವೈಯಕ್ತಿಕ ಎಂಬಂತೆ ಸ್ಪರ್ಧೆಗಳು ಹಾಗೂ ಹೂ ಕಟ್ಟುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆಟಿ ತಿಂಗಳ ವಿಶೇಷತೆ ಕುರಿತಂತೆ ಆಹ್ವಾನಿತ ಉಪನ್ಯಾಸಕಾರರು ಮಾತಾಡುತ್ತಾರೆ. ಪರಿಸರದ ಬಂಟ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.






















































































































