ಶಿರ್ವ ಬಂಟರ ಸಂಘದ ಮಹಿಳಾ ವಿಭಾಗದ ವತಿಯಿಂದ ‘ತುಳುವೆರೆ ಆಟಿ’ ಕಾರ್ಯಕ್ರಮವು ಜುಲೈ 26 ರಂದು ಶಿರ್ವದ ಬಂಟಾಸ್ ಅಡಿಟೋರಿಯಂನಲ್ಲಿ ಯಶಸ್ವಿಯಾಗಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಾಯಿನಾಥ ಶೆಟ್ಟಿ ವಹಿಸಿದ್ದರು. ಶಿರ್ವ ಬಂಟರ ಸಂಘದ ಸ್ಥಾಪಕ ಮಹಿಳಾ ಅಧ್ಯಕ್ಷೆ ಶ್ರೀಮತಿ ಇಂದಿರಾ ಸುಬ್ಬಯ್ಯ ಹೆಗ್ಡೆ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಿಳಾ ಅಧ್ಯಕ್ಷೆ ಶ್ರೀಮತಿ ದೀಪಾ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಸರ್ವರನ್ನು ಸ್ವಾಗತಿಸಿದರು. ಡಾ| ಜಿ ಶಂಕರ್ ಕಾಲೇಜಿನ ಪ್ರಾಂಶುಪಾಲೆ ಡಾ| ನಿಕೇತನರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಆಟಿಯ ಮಹತ್ವ ಮತ್ತು ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ನೂತನವಾಗಿ ಶಿರ್ವದಲ್ಲಿ ಪ್ರಾರಂಭಗೊಂಡ ಅಲಿಯನ್ಸ್ ಕ್ಲಬ್ ನ ಅಧ್ಯಕ್ಷರಾದ ಸದಾನಂದ ಶೆಟ್ಟಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅಂತರಾಷ್ಟೀಯ ಮಟ್ಟದಲ್ಲಿ ಸಾಧನೆ ಮಾಡಿದ ಶ್ರೀಮತಿ ಸೌಮ್ಯ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಸನ್ಮಾನ ಪತ್ರವನ್ನು ಶ್ರೀಮತಿ ಲಕ್ಷ್ಮಿ ಶೆಟ್ಟಿ ಪಂಜಿಮಾರು ಮತ್ತು ಶ್ರೀಮತಿ ಸುಪ್ರೀತ ಶೆಟ್ಟಿ ವಾಚಿಸಿದರು.



ವೇದಿಕೆಯಲ್ಲಿ ಉಡುಪಿ ಬಂಟರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವಿರೇಂದ್ರ ಶೆಟ್ಟಿ, ಕಾರ್ಯದರ್ಶಿ ಧೀರಜ್ ಶೆಟ್ಟಿ, ಕೋಶಾಧಿಕಾರಿ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಶ್ರೀಮತಿ ಸರಿತಾ ಶೆಟ್ಟಿ ಮತ್ತು ಸುಪ್ರೀತ ಶೆಟ್ಟಿ ಪ್ರಾರ್ಥನೆ ನೆರವೇರಿಸಿದರು. ಶ್ರೀಮತಿ ಲಕ್ಮೀ ದೇವಿ ಮತ್ತು ಶ್ರೀಮತಿ ಸುಪ್ರೀತಾ ಶೆಟ್ಟಿ ನಿರೂಪಿಸಿ, ಶ್ರೀಮತಿ ಶುಭ ಲಕ್ಷ್ಮಿ ಧನ್ಯವಾದ ಸಮರ್ಪಿಸಿದರು. ಸಂಘದ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ನಡೆದು, ಸದಸ್ಯರು ತಮ್ಮ ಮನೆಗಳಲ್ಲಿ ತಯಾರಿಸಿದ ಆಟಿಯ ಮಹತ್ವದ ಸುಮಾರು 50 ಬಗೆಯ ವಿವಿಧ ಖಾದ್ಯಗಳ ಸಹಭೋಜನ ಮಾಡಲಾಯಿತು.




















































































































