ರಾಷ್ಟ್ರಮಟ್ಟದ ಎಂಬಿಬಿಎಸ್ ಹಾಗೂ ಇತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಎನ್ಟಿಎ ನಡೆಸಿದ ನೀಟ್ ೨೦೨೬ರ ಫಲಿತಾಂಶದಲ್ಲಿ ೭೨೦ಕ್ಕೆ ೬೮೦ ಅಂಕಗಳೊಂದಿಗೆ ಜನರಲ್ ಮೆರಿಟ್ನಲ್ಲಿ ೨೬೭ನೇ ರ್ಯಾಂಕ್ ಪಡೆದು ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾದ ಜ್ಞಾನಸುಧಾದ ಮೇಧಾಂಶ್ ಎನ್ ಬಿ ಇವರಿಗೆ ೨.೫ಲಕ್ಷ, ಹಾಗೂ ೬೭೦ ಅಂಕಗಳೊಂದಿಗೆ ರಾಷ್ಟ್ರಮಟ್ಟದಲ್ಲಿ ೭೦೧ನೇ ರ್ಯಾಂಕ್ ಪಡೆದುಕೊಂಡ ಅನಿರುದ್ಧ್ ಆರ್ ಉಡುಪ ಇವರಿಗೆ ೨ಲಕ್ಷ ರೂಗಳ ಪ್ರೋತ್ಸಾಹಧನವನ್ನು ಘೋಷಿಸಲಾಯಿತು ಮಣಿಪಾಲ ಜ್ಞಾನಸುಧಾದಲ್ಲಿ ನಡೆದ ನೀಟ್ ಸಾಧಕರ ಅಭಿನಂದನಾ ಕಾರ್ಯಕ್ರಮದಲ್ಲಿ ೬೧೧ ಅಂಕ ಪಡೆದ ಪಿ ಅಖಿಲ್ ಶರ್ಮ ೬೯೩೩ನೇ ರ್ಯಾಂಕ್ (ಜನರಲ್ ಮೆರಿಟ್), ೬೦೩ ಅಂಕ ಪಡೆz ಎನ್ ಶ್ರೇಯಸ್ ೯೧೨೪ನೇ ರ್ಯಾಂಕ್ (ಜನರಲ್ ಮೆರಿಟ್) ಹಾಗೂ ೫೦೦ಕ್ಕಿಂತ ಅಧಿಕ ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್ ಯು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು. ಮಣಿಪಾಲ ಜ್ಞಾನಸುಧಾದ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ ಮಾತನಾಡಿ, ಮಣಿಪಾಲ ಜ್ಞಾನಸುಧಾದ ಪ್ರಥಮ ಬ್ಯಾಚ್ ನ ಫಲಿತಾಂಶವನ್ನು ಪ್ರಶಂಶಿಸಿದರು. ಈ ಬಾರಿಯ ನೀಟ್ ೨೦೨೬ರ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಒಟ್ಟು ೫೨೮ ವಿದ್ಯಾರ್ಥಿಗಳಲ್ಲಿ ೧೫ ವಿದ್ಯಾರ್ಥಿಗಳು ೬೦೦ಕ್ಕಿಂತ ಅಧಿಕ ಅಂಕ, ೫೯ ವಿದ್ಯಾರ್ಥಿಗಳು ೫೫೦ಕ್ಕಿಂತ ಅಧಿಕ ಹಾಗೂ ೧೩೩ ವಿದ್ಯಾರ್ಥಿಗಳು ೫೦೦ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. ಸಂಸ್ಥೆಯ ೨೬೦ ವಿದ್ಯಾರ್ಥಿಗಳು ೯೦ ಪರ್ಸಂಟೈಲ್ಗಿಂತ ಅಧಿಕ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಪಡೆದ ಟ್ರಸ್ಟ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ಉಪ ಪ್ರಾಂಶುಪಾಲರಾದ ರವಿ ಜಿ ಮತ್ತು ಹೇಮಂತ ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಕು.ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.






















































































































