
ಜೈನ ಕಾಶಿಯೆಂದು ಪ್ರಸಿದ್ಧವಾದ ಮೂಡುಬಿದಿರೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರತಿಷ್ಠಿತ ಎಸ್ ಜೆ ಶೆಟ್ಟಿ ‘ಸ್ಹೋ ಟೆಲ್ ‘ಕದಂಬ’ ಜುಲೈ 15 ರಂದು ಬುಧವಾರ ಬೆಳಿಗ್ಗೆ 10.30 ಗಂಟೆಗೆ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ಮೂಡುಬಿದಿರೆ ಕನ್ನಡ ಭವನದ ಹತ್ತಿರವಿರುವ ‘ಕದಂಬ’ ಹೋಟೆಲಿನಲ್ಲಿ ಲಕ್ಸುರಿ ರೂಮುಗಳು, ಬಾರ್ ಆಂಡ್ ರೆಸ್ಟೋರೆಂಟ್, ಆಕರ್ಷಕ ಬಾಂಕ್ವೆಟ್ ಸಭಾಂಗಣ, ಶುಚಿ ರುಚಿಯಾದ ಕೇಟರಿಂಗ್ ವ್ಯವಸ್ಥೆ ಹಾಗೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಈ ಶುಭ ಕಾರ್ಯಕ್ರಮಕ್ಕೆ ಗಣ್ಯಾತಿ ಗಣ್ಯರು ಆಗಮಿಸಲಿದ್ದು, ಸಮಸ್ತ ಸಮಾಜ ಬಾಂಧವರು ಆಗಮಿಸಿ ನೂತನ ಸಂಸ್ಥೆಗೆ ಪ್ರೋತ್ಸಾಹಿಸಿ, ಶುಭ ಹಾರೈಸಬೇಕೆಂದು ಸಂಸ್ಥೆಯ ಸಿಎಂಡಿ ಶಿವರಾಮ್ ಜೆ ಶೆಟ್ಟಿ, ಆಡಳಿತ ಪಾಲುದಾರರಾದ ಆಶಿಕ್ ಎಸ್ ಶೆಟ್ಟಿ ಹಾಗೂ ಅಕ್ಷಯ್ ಎಸ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.






















































































































