

ಶ್ರೀ ರಾಮಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ವತಿಯಿಂದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಜಂಟಿ ಆಯೋಜನೆಯಲ್ಲಿ ಪ್ರಭು ಶ್ರೀ ರಾಮಚಂದ್ರ ದೇವರ ಅವತಾರದ ಆರಂಭದಿಂದ ಶ್ರೀ ದೇವರ ನಿರ್ಯಾಣದವರೆಗಿನ ಸಂಪೂರ್ಣ ಶ್ರೀರಾಮ ಚರಿತ್ರೆ ಶ್ರೀರಾಮಕಥಾ ಹೃದಯಂ ಪುಣ್ಯಪ್ರದ ಕಾರ್ಯಕ್ರಮದ ದಶಮ ಪ್ರಸ್ತುತಿ ಸೀತಾನ್ವೇಷಣೆ ತಾಳಮದ್ದಳೆ ಮತ್ತು ಸನ್ಮಾನ ಕಾರ್ಯಕ್ರಮವು ಜೂನ್ 28 ರಂದು ಅಪರಾಹ್ನ 2.15 ರಿಂದ ವಿದ್ಯಾವಿಹಾರ್ ಪಶ್ಚಿಮದ ಗಾಂವ್ದೇವಿ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಕಳೆದ ಹಲವಾರು ವರ್ಷಗಳಿಂದ ಮುಂಬಯಿ ಮಹಾನಗರದಲ್ಲಿ ಯಕ್ಷಗಾನ ಕಲಾವಿದರಾಗಿ ಯಕ್ಷಗಾನ ಗುರುವಾಗಿ ಸೇವೆ ಸಲ್ಲಿಸುತ್ತಿರುವ ನ್ಯಾಯವಾದಿ ಶ್ರೀಮತಿ ಆರ್.ಎಲ್ ಭಟ್, ಯಕ್ಷಗಾನ ಸಾಹಿತಿ, ಅರ್ಥದಾರಿ ಕೊಲ್ಯಾರು ರಾಜು ಶೆಟ್ಟಿ, ಶ್ರೀ ನಾರಾಯಣ ಗುರು ಯಕ್ಷಗಾನ ಮಂಡಳಿಯ ನೇಪಥ್ಯ ಕಲಾವಿದ ಕೃಷ್ಣ ಬಂಗೇರ, ತ್ರಿಭಾಷ ಪ್ರಸಂಗಕರ್ತ, ಕಲಾವಿದ ಎಂ.ಟಿ ಪೂಜಾರಿ ದಂಪತಿಗಳನ್ನು ಗೌರವಿಸಲಾಗುವುದು.




ಮಂದಿರದ ಪ್ರಧಾನ ಅರ್ಚಕ ಹರಿದಾಸ ಭಟ್ ಪೆರ್ಣಂಕಿಲ ಅವರ ಅಧ್ಯಕ್ಷತೆ ಮತ್ತು ಶುಭಾಶೀರ್ವಾದದೊಂದಿಗೆ ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನ ವಿದ್ಯಾವಿಹಾರ್ ಇದರ ಆಡಳಿತ ಮೊಕ್ತೇಸರರಾದ ಹರಿದಾಸ ಗೋಪಾಲ ಶೆಟ್ಟಿ ಅವರ ಸಹಕಾರದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ಕಲಾಪೋಷಕ ನಿತ್ಯಾನಂದ ಡಿ ಕೋಟ್ಯಾನ್, ಶ್ರೀ ಗುರು ನಾರಾಯಣ ಯಕ್ಷಗಾನ ಕಲಾ ಮಂಡಳಿಯ ಕಾರ್ಯಾಧ್ಯಕ್ಷ ನವೀನ್ ಪಡು ಇನ್ನಾ ಅವರು ಆಗಮಿಸಲಿದ್ದಾರೆ. ಶ್ರೀ ಅಯ್ಯಪ್ಪ ಭಜನಾ ಮಂಡಳಿ ಡೊಂಬಿವಲಿ ಪೂರ್ವ ಇವರಿಂದ ಶ್ರೀರಾಮ ಸಂಕೀರ್ತನೆ ನಡೆಯಲಿದೆ. ಕಲಾಭಿಮಾನಿಗಳು, ಕಲಾಪೋಶಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕಲಾವಿದರೂ, ಕಲಾ ಸಂಘಟಕರಾದ ವಾಸು ಶೆಟ್ಟಿ ಮಾರ್ನಾಡ್ ಮತ್ತು ಸುರೇಶ್ ಶೆಟ್ಟಿ ನಂದ್ರೊಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




























































































































