
ಬ್ರಹ್ಮಾವರ, ಜೂನ್ ೨೫: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ ನಾಯಕರ ಪದಗ್ರಹಣ ಕಾರ್ಯಕ್ರಮ ನೆರವೇರಿತು. ಉಡುಪಿ ಕುಂಜಿಬೆಟ್ಟಿನ ಶಾರದಾ ರೆಸಿಡೆನ್ಶಿಯಲ್ ಸ್ಕೂಲ್ನ ಪ್ರಾಂಶುಪಾಲರಾದ ವಿನ್ಸೆಂಟ್ ಡಿಕೋಸ್ಟಾ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಜ್ಯೋತಿ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಲ್ಲಾ ಮಕ್ಕಳು ನಮ್ಮ ದೇಶದ ಭವಿಷ್ಯವನ್ನು ರೂಪಿಸುವವರು. ಉತ್ತಮ ನಾಯಕರು ಸಮಗ್ರತೆ, ಆತ್ಮಸ್ಥೆöÊರ್ಯವನ್ನು ಕಾಯ್ದುಕೊಂಡು ನಮ್ಮ ವ್ಯವಸ್ಥೆಯಲ್ಲಿ ಹೊಸತನ್ನು ಅನ್ವೇಷಿಸುತ್ತಾರೆ. ಈ ಮಣ್ಣಿನಿಂದ ಅನ್ನವನ್ನು ತಿಂದು ಉಸಿರಾಡುತ್ತಿರುವ ನಾವು ಈ ಭೂಮಿಗೆ ಕೊಡುಗೆಯನ್ನು ನೀಡಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಎಲ್ಲಾ ನಾಯಕರಿಗೆ ಶುಭಹಾರೈಸಿ ಮಾತನಾಡಿ ಅಧಿಕಾರ ವಹಿಸಿಕೊಂಡ ಎಲ್ಲಾ ನಾಯಕರು ಜವಾಬ್ದಾರಿಯಿಂದ ತಮ್ಮ ಕೆಲಸವನ್ನು ನಿರ್ವಹಿಸಿ ಇತರರಿಗೆ ಸ್ಫೂರ್ತಿಯನ್ನು ತುಂಬಬೇಕು. ಜಿ ಎಮ್ ನಿರಂತರ ಪಠ್ಯ ಪಠ್ಯೇತರ ಚಟುವಟಿಕೆಗಳನ್ನು ನಡೆಸುವುದರ ಮೂಲಕ ವಿದ್ಯಾರ್ಥಿಗಳಿಗೆ ಆತ್ಮಸ್ಥೆöÊರ್ಯದ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸುತ್ತಿದೆ. ಅದೇ ರೀತಿ ಇಲ್ಲಿ ಕಲಿಯುವ ಮೌಲ್ಯ ಕೌಶಲ್ಯಗಳು ಮಕ್ಕಳ ಮುಂದಿನ ಭವಿಷ್ಯಕ್ಕೆ ನೆರವಾಗಲಿದೆ ಎಂದರು.


ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಎಲ್ಲಾ ನಾಯಕರಿಂದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಶಾಲಾ ವಿದ್ಯಾರ್ಥಿ ನಾಯಕರು ಶಾಲಾ ಮಂತ್ರಿ ಮಂಡಲದ ಸದಸ್ಯರು, ವಿವಿಧ ಹೌಸ್ ಹಾಗೂ ಕ್ಲಬ್ಗಳ ಅಧ್ಯಕ್ಷರು, ತರಗತಿ ನಾಯಕರು ಬ್ಯಾಡ್ಜ್ನ್ನು ಪಡೆದು ಅಧಿಕಾರವನ್ನು ಸ್ವೀಕರಿಸಿದರು. ರಾಷ್ಟಿçÃಯ ಮಟ್ಟದ ತ್ರೋಬಾಲ್ ಪಂದ್ಯದಲ್ಲಿ ಸಾಧನೆ ಮಾಡಿದ ಕು. ಹಂಶಿಕಾರವರನ್ನು ಸAಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಜಿ ಎಮ್ ಗ್ಲೋಬಲ್ ಸ್ಕೂಲ್ನ ಆಡಳಿತ ನಿರ್ದೇಶಕರಾದ ಪ್ರಣವ್ ಶೆಟ್ಟಿ, ಪ್ರಾಂಶುಪಾಲೆ ದೀಪ್ತಿ ಶೆಟ್ಟಿ, ಪಿ ಟಿ ಎ ಅಧ್ಯಕ್ಷೆ ಡಾ. ಅನುಷ ಸುಬ್ರಹ್ಮಣ್ಯಂ, ಹಳೆ ವಿದ್ಯಾರ್ಥಿ ಬಿ ಎನ್ ಸಾಜದ್ ಖಾನ್, ಶ್ರೀಮಾ ಪ್ರಣವ್, ಶ್ರೀಧರ ಶೆಟ್ಟಿ, ಜಯಂತಿ ಶೆಟ್ಟಿ, ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




























































































































