

ಬಂಟರ ಯಾನೆ ನಾಡವರ ಮಾತೃ ಸಂಘದ ಬೆಳ್ತಂಗಡಿ ತಾಲೂಕು ಸಮಿತಿ ಸಭೆಯು ಮೇ 20 ರಂದು ಮುಂಡಾಡಿ ಗುತ್ತು ಜಯರಾಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಬಂಟರ ಭವನದಲ್ಲಿ ನಡೆಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ 108 ನೇ ವರ್ಷದ ಕಾರ್ಯಕಾರಿ ಸಮಿತಿಗೆ ಅವಿರೋಧವಾಗಿ ಆಯ್ಕೆಯಾದ ಎಂ ಜಯರಾಮ ಭಂಡಾರಿ, ಕಿರಣ್ ಕುಮಾರ್ ಶೆಟ್ಟಿ, ಮುಂಡಾಡಿ ಗುತ್ತು ಜಯರಾಮ ಶೆಟ್ಟಿ ಹಾಗೂ ಸುಜಾತ ಶೆಟ್ಟಿ ಪೆರಿಂಜೆ ಇವರು ಸಭೆಯಲ್ಲಿ ಭಾಗವಹಿಸಿದ್ದರು.


ಸಭೆಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಬೆಳ್ತಂಗಡಿ ತಾಲೂಕಿನ ಮುಂದಿನ ಸಂಚಾಲಕರಾಗಿ ಎಂ ಜಯರಾಮ ಭಂಡಾರಿ ಹಾಗೂ ಸಹ ಸಂಚಾಲಕರಾಗಿ ಕಿರಣ್ ಕುಮಾರ್ ಶೆಟ್ಟಿಯವರನ್ನು ಪುನರಾಯ್ಕೆಗೊಳಿಸಲಾಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಆಡಳಿತ ಮಂಡಳಿಗೆ ಬೆಳ್ತಂಗಡಿ ತಾಲೂಕಿನಿಂದ ನಾಮ ನಿರ್ದೇಶನ ಸದಸ್ಯರಾಗಿ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಅಜಿತ್ ಜಿ ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.




























































































































