
ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಕಳ ಹೆಬ್ರಿ ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ನೂತನ ಸಂಚಾಲಕರಾಗಿ ಉದ್ಯಮಿ, ಸಮಾಜಸೇವಕ ವಿಜಯ ಶೆಟ್ಟಿ ಹಾಗೂ ಸಹ ಸಂಚಾಲಕರಾಗಿ ಉದ್ಯಮಿ ಕೆ ರವಿ ಶೆಟ್ಟಿ ಕುಕ್ಕುಂದೂರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೊಡುಗೈ ದಾನಿ ವಿಜಯ ಶೆಟ್ಟಿಯವರು ಧಾರ್ಮಿಕ ಕ್ಷೇತ್ರ, ಸಾಮಾಜಿಕ ಕ್ಷೇತ್ರದ ಸಾಧಕರಾಗಿಯೂ ಗುರುತಿಸಿಕೊಂಡಿದ್ದು, ಪಟ್ಲ ಫೌಂಡೇಶನ್ ಕಾರ್ಕಳ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.



























































































































