
ಉಡುಪಿ ಜಿಲ್ಲೆಯ ಇನ್ನಂಜೆ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಹಳೆ ವಿದ್ಯಾರ್ಥಿ ಹಾಗೂ ದಾನಿಗಳ ಸಹಕಾರದಲ್ಲಿ ಇನ್ನಂಜೆ ಕನ್ನಡ ಮಾಧ್ಯಮ ಶಾಲೆಯ ಉಚಿತ ವಿದ್ಯಾಭ್ಯಾಸದ ಸಹಾಯಾರ್ಥವಾಗಿ ಇನ್ನಂಜೆ ಮೈದಾನದಲ್ಲಿ ಇನ್ನಂಜೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಕೂಟ ಆಯೋಜಿಸಿ, ಅದರಲ್ಲಿ ಉಳಿದ ಮೊತ್ತ 1,67,875 ರೂಪಾಯಿಯನ್ನು ಇನ್ನಂಜೆ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ನಟರಾಜ್ ಉಪಾಧ್ಯಾಯ, ದೈಹಿಕ ಶಿಕ್ಷಕರಾದ ನವೀನ್ ಶೆಟ್ಟಿ, ಅಧ್ಯಾಪಕಿಯಾದ ಶಶಿಕಲಾ ಆಚಾರ್ಯ ಇವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಇನ್ನಂಜೆ ಫ್ರೆಂಡ್ಸ್ ಇದರ ಸದಸ್ಯರುಗಳಾದ ದಿವೇಶ್ ಶೆಟ್ಟಿ, ರಾಜೇಶ್ ಕುಲಾಲ್, ಅನಿರುದ್ಧ, ಪ್ರಶಾಂತ್ ಆಚಾರ್ಯ, ವಿಕೇಶ್ ಶೆಟ್ಟಿ, ನಾಗೇಶ್ ಆಚಾರ್ಯ, ಪ್ರಥಮ್ ಆಚಾರ್ಯ, ನಿತೇಶ್ ಆಚಾರ್ಯ, ಸಚಿನ್ ಅಮೀನ್, ಪವನ್ ಕುಲಾಲ್, ಸಂದೀಪ್ ಅಜೀಲಕಾಡು, ಸಂದೀಪ್ ಆಚಾರ್ಯ, ಗಣೇಶ್ ಆಚಾರ್ಯ, ರವಿ ಪ್ರಸಾದ್, ನೀಲೇಶ್ ಶೆಟ್ಟಿ, ಕೃಷ್ಣ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು.


2025-26 ರ ಸಾಲಿನ ಇನ್ನಂಜೆ ಶಾಲೆಯ 10ನೇ ತರಗತಿಯಲ್ಲಿ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ ವಿಭಾಗಕ್ಕೆ ಶೇಕಡಾ 100 ಫಲಿತಾಂಶ ಲಭಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಇನ್ನಂಜೆ ಫ್ರೆಂಡ್ಸ್ ನ ದಿವೇಶ್ ಶೆಟ್ಟಿ, ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಊರ ಪರವೂರ ದಾನಿಗಳಿಗೆ, ನಮ್ಮನ್ನು ಪ್ರೋತ್ಸಾಹಿಸಿದ ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಗೆ, ಕಾರ್ಯಕ್ರಮದ ಯಶಸ್ಸಿಗೆ ಬೆನ್ನುಲುಬಾದಂತಹ ನನ್ನೆಲ್ಲಾ ಸಂಘಟಕ ಮಿತ್ರರಿಗೆ, ಶಿಸ್ತುಬದ್ಧವಾಗಿ ಹಾಗೂ ಸಂಯಮದಿಂದ ವರ್ತಿಸಿದ ಕ್ರೀಡಾಪಟುಗಳಿಗೆ, ಕ್ರೀಡಾಭಿಮಾನಿಗಳಿಗೆ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳನ್ನು ತಿಳಿಸಿದರು.
ಚಿತ್ರ, ವರದಿ : ದಿನೇಶ್ ಕುಲಾಲ್





























































































































