

ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಇದರ ಕೇಂದ್ರ ಕಾರ್ಯಕಾರಿ ಸಮಿತಿಗೆ ಕಾಸರಗೋಡು ತಾಲೂಕಿನಿಂದ 8 ಸ್ಥಾನಗಳಿಗಾಗಿ ಮೇ 07 ರಂದು ನಡೆದ ಚುನಾವಣೆಯಲ್ಲಿ ಕೆ ಅಜಿತ್ ಕುಮಾರ್ ರೈ ಮಾಲಾಡಿ ನೇತೃತ್ವದ ಕಿರಣ್ ಮಾಡ, ಚಿದಾನಂದ ಆಳ್ವ, ನ್ಯಾಯವಾದಿ ಬಿ ಸುಬ್ಬಯ್ಯ ರೈ, ಮುಕ್ತಾನಂದ ರೈ, ಮೋಹನ್ ಕೆ ರೈ, ವಸಂತರಾಜ್ ಶೆಟ್ಟಿ, ಶಶಿಧರ ಶೆಟ್ಟಿ ಹಾಗೂ ಸದಾನಂದ ರೈಯವರು ಬಹುಮತದಿಂದ ಗೆದ್ದು ವಿಜಯಶಾಲಿಯಾಗಿದ್ದಾರೆ. ಕೆ ಅಜಿತ್ ಕುಮಾರ್ ರೈ ಮಾಲಾಡಿಯವರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.



























































































































