
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ನಿಂದ ನೀಡಲ್ಪಡುವ 2026ನೇ ಸಾಲಿನ ಕಾಯಕಯೋಗಿ ರಾಜ್ಯ ಪ್ರಶಸ್ತಿಯನ್ನು ಮೇ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ತೀರ್ಥಹಳ್ಳಿಯ ಸಮಾಜ ಸೇವಕ, ಹಿರಿಯ ಪತ್ರಕರ್ತ ಡಿ.ಎಸ್ ವಿಶ್ವನಾಥ ಶೆಟ್ಟಿಯವರಿಗೆ ಪ್ರದಾನ ಮಾಡಲಾಯಿತು. ಪರಿಷತ್ನ ಮಹಾಪೋಷಕರರು, ಇಸ್ರೋ ಮಾಜಿ ಅಧ್ಯಕ್ಷ ಡಾ. ಎ.ಎಸ್ ಕಿರಣ್ ಕುಮಾರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ. ಅಂಜಿನಪ್ಪ, ಕರಾವೈಸಂ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್, ಶಿವಮೊಗ್ಗ ಜಿಲ್ಲಾಧ್ಯಕ್ಷ ರವಿಕುಮಾರ್, ತೀರ್ಥಹಳ್ಳಿ ತಾಲೂಕು ಅಧ್ಯಕ್ಷೆ ಬಿ ವರಲಕ್ಷ್ಮಿ ಪ್ರಕಾಶ್, ರಿಪ್ಪನ್ಪೇಟೆಯ ಸವಿತಾ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.



























































































































