
ಕಾರ್ಸ್ ಅಡ್ಡ ಫೈನಾನ್ಸ್ ಹೌಸ್ ಹಾಗೂ ಕಾರ್ಸ್ ಅಡ್ಡ ಸೇವಾ ಟ್ರಸ್ಟ್ ಮಂಗಳೂರು ಇವರ ವತಿಯಿಂದ ಸಾಮಾಜಿಕ ಸೇವಾ ಯೋಜನೆಯ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳ ಶಿಕ್ಷಣದ ಉತ್ತೇಜನಕ್ಕಾಗಿ ವಿದ್ಯಾರ್ಥಿಗಳಿಗೆ (1ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ) ಶೈಕ್ಷಣಿಕ ಪೂರಕ ವಸ್ತುಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದಾರೆ. ಈ ಯೋಜನೆಗೆ ಸಾಕಷ್ಟು ಅರ್ಹ ಅರ್ಜಿಗಳು ಬಂದಿದ್ದು, ಒಂದು ಮನೆಯ ಒಂದು ವಿದ್ಯಾರ್ಥಿಗೆ ಮಾತ್ರ ಕಲಿಕಾ ವಸ್ತುಗಳನ್ನು ನೀಡಲಾಗುತ್ತದೆ. ಏಪ್ರಿಲ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಮೇ 23 ರಂದು ಸಂಜೆ 4.00 ರಿಂದ 5.30 ರವರೆಗೆ ಈ ಶೈಕ್ಷಣಿಕ ಪೂರಕ ವಸ್ತುಗಳನ್ನು ಅರ್ಹ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂದು ಕಾರ್ಸ್ ಅಡ್ಡ ಫೈನಾನ್ಸ್ ಹೌಸ್ ನ ಆಡಳಿತ ನಿರ್ದೇಶಕರಾದ ಮನೋಜ್ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























































































































