

ಹಲವಾರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಾವೂರು ಮುಲ್ಲಕಾಡು ಪರಿಸರದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಊರಿನವರೆಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾದ ಸಂಘಟನೆಯಾದ ಮುಲ್ಲಕಾಡು ಫ್ರೆಂಡ್ಸ್ (ರಿ) 21 ನೇ ವರ್ಷದ ಯುಗಾದಿ ಉತ್ಸವದ ಸಲುವಾಗಿ ವೈವಿಧ್ಯಮಯ ಕಾರ್ಯಕ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಅಶಕ್ತರಿಗೆ ಸಹಾಯಧನ, ಮಕ್ಕಳಿಗೆ ಪ್ರೋತ್ಸಾಹ ಧನ, ಪುಸ್ತಕ ವಿತರಣೆ ಹಾಗೂ ಪ್ರಸನ್ನ ಶೆಟ್ಟಿ ಬೈಲೂರು ನಿರ್ದೇಶನದ ಚೈತನ್ಯ ಕಲಾವಿದರು ಬೈಲೂರು ತಂಡದವರಿಂದ ‘ರಾಘು ಮಾಸ್ಟ್ರು’ ಹಾಸ್ಯಮಯ ತುಳು ನಾಟಕ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಆಸರೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈಯವರು ನೆರವೇರಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಜೇಶ್ ಚೌಟ, ಮಾಜಿ ಮಂತ್ರಿ ಕೃಷ್ಣ ಜೆ ಪಾಲೇಮಾರ್, ಬಿಲ್ಲವ ಬ್ರಿಗೇಡ್ ಸಂಸ್ಥಾಪಕ ಸದಾನಂದ ಪೂಜಾರಿ, ಗುತ್ತಿಗೆದಾರ ರಾಜಶೇಖರ್ ಕೋಟ್ಯಾನ್, ಸಮಾಜಸೇವಕ ಅರ್ಜುನ್ ಭಂಡಾರ್ಕರ್ ಅವರ ಘನ ಉಪಸ್ಥಿತಿಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಜನಪ್ರಿಯ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.




ಕಾರ್ಯಕ್ರಮವು ಮೇ 02 ರಂದು ಶನಿವಾರ ಸಂಜೆ 6.30 ಕ್ಕೆ ಸರಿಯಾಗಿ ಶ್ರೀ ಅಯ್ಯಪ್ಪ ಭಜನಾ ಮಂದಿರ ಬಳಿ ಇರುವ ಮುಲ್ಲಕಾಡು ಕೇಂದ್ರ ಮೈದಾನದಲ್ಲಿ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಾರ್ಯಕಾರಿ ಸದಸ್ಯ ಸತೀಶ್ ಮುಂಚೂರು, ಕೋಸ್ಟಲ್ ವಲಯ ಬಸ್ ಮಾಲಕರ ಸಂಘದ ಅಧ್ಯಕ್ಷ ನರೇಶ್ ಪೂಜಾರಿ, ಸುಹಾನ ಟ್ರಾವೆಲ್ಸ್ ಮಾಲಕ ಸಯ್ಯದ್ ಅನ್ಸಾರ್, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಚಂದ್ರಶೇಖರ ಪೂಜಾರಿ, ದೀಪಕ್ ಕೆ ಪೂಜಾರಿ, ಬಬಿತ ರವೀಂದ್ರ, ಪ್ರಶಾಂತ್ ಪೂಜಾರಿ, ಸುಶಾಂತ್ ಶೆಟ್ಟಿ, ಗೌತಮ್ ನೊರೋನ್ಹ, ಪ್ರತೀಕ್ ಪೂಜಾರಿ, ವಕೀಲ ಶಿವಪ್ರಸಾದ್ ಶೆಟ್ಟಿ, ರಾಘವೇಂದ್ರ ಉಡುಪ, ಶಬರಿ ಗ್ಯಾರೇಜ್ ಮಾಲಕರಾದ ಎಂ ರಾಘವ ಅವರ ಗೌರವ ಉಪಸ್ಥಿತಿಯಿರಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದ ಸುರತ್ಕಲ್ ನ ಡಿ ಟ್ರಿಕ್ಸ್ ಡಾನ್ಸ್ ಸ್ಟುಡಿಯೋ ಅವರಿಂದ ನೃತ್ಯ ಪ್ರದರ್ಶನವೂ ಜರುಗಲಿದ್ದು, ಕಾರ್ಯಕ್ರಮದ ನಿರೂಪಣೆಯನ್ನು ಖ್ಯಾತ ವಾರ್ತಾ ವಾಚಕಿ ಡಾ| ಪ್ರಿಯಾ ಹರೀಶ್ ನಡೆಸಿಕೊಡಲಿದ್ದಾರೆ. ಮುಲ್ಲಕಾಡು ಪರಿಸರದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಡಿಸ್ಟ್ರಿಂಕ್ಷನ್ ಪಡೆದ 3 ವಿದ್ಯಾರ್ಥಿಗಳಿಗೆ ಹಾಗೂ 10 ಶಾಲಾ ಶಿಕ್ಷಕಿಯರಿಗೆ ಸನ್ಮಾನ, ಸಮಾಜದ ಏಳಿಗೆಗಾಗಿ ದುಡಿದ ಊರಿನ ಪ್ರತಿ ಸಂಘ ಸಂಸ್ಥೆಯ ಪ್ರಮುಖರನ್ನು ಕೂಡಾ ಗೌರವಿಸಲಿದ್ದೇವೆ, ಎಲ್ಲರೂ ಸಮಯಕ್ಕೆ ಸರಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮುಲ್ಲಕಾಡು ಫ್ರೆಂಡ್ಸ್ ನ ಅಧ್ಯಕ್ಷರಾದ ಸುಚೇತನ್ ಜಿ ಕಾವೂರು ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























































































































