
ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಮೇ 30 ಶನಿವಾರದಂದು ನಡೆಯಲಿರುವ ಪಟ್ಲ ಸಂಭ್ರಮ- 2026 ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ (SSLC) ಮತ್ತು ಪಿಯುಸಿ (2nd PUC) ವಿಭಾಗದಲ್ಲಿ ಶೇಕಡ 90ಕ್ಕಿಂತ ಮೇಲ್ಪಟ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ವತಿಯಿಂದ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. ಈ ಯೋಜನೆಯ ಫಲಾನುಭವಿಗಳು ತಮ್ಮ ಭಾವಚಿತ್ರ, ಬಿಪಿಎಲ್ ಕಾರ್ಡ್ ಪ್ರತಿ ಹಾಗೂ ಅಂಕಪಟ್ಟಿಯೊಂದಿಗೆ ಮೇ 15 ರ ಮುಂಚಿತವಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ವಿದ್ಯಾರ್ಥಿ ವೇತನವನ್ನು ಸ್ವೀಕರಿಸುವ ವಿದ್ಯಾರ್ಥಿಗಳು ಸಮಾರಂಭದಂದು ಬೆಳಿಗ್ಗೆ ಗಂಟೆ 9 ಕ್ಕೆ ಸರಿಯಾಗಿ ಕಡ್ಡಾಯವಾಗಿ ಹಾಜರಿರಬೇಕು. ವಿದ್ಯಾರ್ಥಿಗಳು ಸ್ವಯಂ ಬಾರದೇ ಇದ್ದಲ್ಲಿ ಆ ಅರ್ಜಿಯನ್ನು ಮಾನ್ಯ ಮಾಡಲಾಗುವುದಿಲ್ಲ. ದಾಖಲೆಗಳೊಂದಿಗೆ ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ :


ಸಿಎ ಸುದೇಶ್ ಕುಮಾರ್ ರೈ
ಶಾಪ್ ನಂ. 16 ಮತ್ತು 17
ಎರಡನೇ ಮಹಡಿ, ಎಂಪೈರ್ ಮಾಲ್
ಎಂ.ಜಿ ರಸ್ತೆ, ಮಂಗಳೂರು- 575003
ಸಂಪರ್ಕ ಸಂಖ್ಯೆ 9448623375

























































































































