
ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇಲ್ಲಿ ಅತ್ತೂರು ಭಂಡಾರ ಮನೆ ರಾಜೇಶ್ ಶೆಟ್ಟಿಯವರಿಂದ ಸೇವಾ ರೂಪವಾಗಿ ಪಕ್ಷಿಕೆರೆ ಪೇಟೆಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಹಾದ್ವಾರ ಹಾಗೂ ದೇವಸ್ಥಾನದ ನವೀಕೃತಗೊಂಡ ಹವಾನಿಯಂತ್ರಿತ ಆಶಾಲತಾ ನಾರಾಯಣ ಶೆಟ್ಟಿ ಸಭಾಭವನದ ಉದ್ಘಾಟನಾ ಸಮಾರಂಭವು ಏಪ್ರಿಲ್ 26ರ ರವಿವಾರದಂದು ಸಾಯಂಕಾಲ 4 ಗಂಟೆಗೆ ಪೇಜಾವರ ಮಠಾಧೀಶರಾದ ವಿಶ್ವ ಪ್ರಸನ್ನ ತೀರ್ಥರ ಉಪಸ್ಥಿತಿಯಲ್ಲಿ ನಡೆಯಲಿರುವುದು. ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ಜರಗಲಿದ್ದು, ಪರಮಪೂಜ್ಯ ಉಡುಪಿ ಪೇಜಾವರ ಅಧೋಕ್ಷಜ ಮಠ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಸುರಗಿರಿ ಆಡಳಿತ ಮೊಕ್ತೇಸರ ರಾಜೇಶ್ ಶೆಟ್ಟಿ ಅತ್ತೂರು ಭಂಡಾರ ಮನೆ ವಹಿಸಿಕೊಳ್ಳಲಿದ್ದಾರೆ. ಶ್ರೀ ಕ್ಷೇತ್ರ ಕಟೀಲು ಅನುವಂಶಿಕ ಅರ್ಚಕ ವೇದಮೂರ್ತಿ ಅನಂತ ಪದ್ಮನಾಭ ಆಸ್ರಣ್ಣ ಶುಭಾಶಂಸನೆಗೈಯಲಿದ್ದಾರೆ. ಶಿಬರೂರು ಕ್ಷೇತ್ರದ ತಂತ್ರಿ ವೇದಮೂರ್ತಿ ವೇದವ್ಯಾಸ ತಂತ್ರಿ ಆಶೀರ್ವಚನ ನೀಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಎಂ.ಆರ್.ಜಿ ಗ್ರೂಪ್ ಮುಖ್ಯಸ್ಥ ಡಾ| ಪ್ರಕಾಶ್ ಶೆಟ್ಟಿ ಆಗಮಿಸಲಿದ್ದಾರೆ.



ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಶಶಿ ಕ್ಯಾಟರರ್ಸ್ ಬರೋಡಾದ ಸಿಎಂಡಿ ಶಶಿಧರ್ ಶೆಟ್ಟಿ ಬರೋಡಾ, ಹೋಟೆಲ್ ಕೃಷ್ಣ ಪ್ಯಾಲೇಸ್ ಮುಂಬಯಿಯ ಸಿಎಂಡಿ ಕೃಷ್ಣ ವೈ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಹಿಳಾ ವಿಭಾಗದ ಮುಖ್ಯಸ್ಥೆ ಉಮಾ ಕೃಷ್ಣ ಶೆಟ್ಟಿ, ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ, ಅತ್ತೂರು ಬೈಲು ಶ್ರೀ ಮಹಾಗಣಪತಿ ಮಂದಿರ ವೇ. ಮೂ. ವೆಂಕಟ ರಾಜ, ಶ್ರೀ ಕ್ಷೇತ್ರ ಸುರಗಿರಿ ಅರ್ಚಕ ವೇ. ಮೂ. ವಿಶ್ವೇಶ್ವರ ಭಟ್, ಮಂಗಳೂರು ಲೋಕಸಭಾ ಕ್ಷೇತ್ರ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮೂಲ್ಕಿ- ಮೂಡುಬಿದ್ರೆ ವಿಧಾನಸಭಾ ಕ್ಷೇತ್ರ ಶಾಸಕ ಉಮಾನಾಥ ಕೋಟ್ಯಾನ್, ಕಾಪು ವಿಧಾನಸಭಾ ಕ್ಷೇತ್ರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜಾ, ಕಿನ್ನಿಗೋಳಿ ದುರ್ಗಾದಯಾ ಸೀತಾರಾಮ ಶೆಟ್ಟಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕೆಮ್ರಾಲ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಯ್ಯದಿ ಪಕ್ಷಿಕೆರೆ ಇವರೆಲ್ಲರೂ ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಂಬಯಿಯ ಖ್ಯಾತ ಉದ್ಯಮಿ ಡಾ. ಪಿ.ವಿ. ಶೆಟ್ಟಿ ಅವರಿಗೆ ಗೌರವಾರ್ಪಣೆ ಹಾಗೂ ಆಶಾಲತಾ ನಾರಾಯಣ ಶೆಟ್ಟಿ ಅತ್ತೂರು ಭಂಡಾರ ಮನೆ ಅವರಿಗೆ ಸನ್ಮಾನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಊರ ಪರವೂರ ಭಕ್ತರನ್ನು ಆಡಳಿತ ಮಂಡಳಿ ಶ್ರೀ ಕ್ಷೇತ್ರ ಸುರಗಿರಿ, ಯುವಕ ಮಂಡಲ ಸುರಗಿರಿ, ಮಹಿಳಾ ಮತ್ತು ಯುವತಿ ಮಂಡಲ ಅತ್ತೂರು, ಕೆಮ್ರಾಲ್, ಕಿಲೆಂಜೂರು ಗ್ರಾಮಸ್ಥರು ಆಮಂತ್ರಿಸಿದ್ದಾರೆ.


























































































































