
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರೊಡಕ್ಷನ್ಸ್ ಹೌಸ್ ‘ಜನ್ಮ ಕ್ರಿಯೇಷನ್ಸ್ ಪುತ್ತೂರು’ ಅರ್ಪಿಸುವ ಡಾ| ಹರ್ಷ ಕುಮಾರ್ ರೈ ಮಾಡಾವು ನಿರ್ಮಾಣದಲ್ಲಿ ಮೂಡಿ ಬಂದಿರುವ ಚಾರ್ವಿ ಆಡಿಯೋಸ್ ರವರ ಚೊಚ್ಚಲ ಕಾಣಿಕೆ ‘ಪುತ್ತೂರ್ದ ಲಿಂಗನಾಥ’ ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವದ ಪ್ರಯುಕ್ತ ಶ್ರೀ ದೇವರ ಭಕ್ತಿ ಪ್ರಧಾನ ತುಳು ವಿಡಿಯೋ ಭಕ್ತಿ ಗೀತೆ ಏಪ್ರಿಲ್ 16ರಂದು ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಬಿಡುಗಡೆಗೊಂಡಿತು. ಶ್ರೀ ಮಹಾಲಿಂಗೇಶ್ವರ ದೇವರಿಗೆ ತುಪ್ಪದ ದೀಪದ ಪ್ರಾರ್ಥನೆಯೊಂದಿಗೆ ದೇವಳದ ಅರ್ಚಕರಾದ ಜಯರಾಮ ಜೋಯಿಸರವರು ಪ್ರಾರ್ಥನೆ ನೆರವೇರಿಸುವ ಮೂಲಕ ವಿಡಿಯೋ ಸಾಂಗ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಜನ್ಮ ಕ್ರಿಯೇಷನ್ಸ್ ನ ಡಾ| ಹರ್ಷ ಕುಮಾರ್ ರೈ ಮಾಡಾವು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಈಶ್ವರ ಬೆಡೆಕಾರ್, ಕರುನಾಡ ಗಾನ ಗಂಧರ್ವ ಮಿಥುನ್ ರಾಜ್ ವಿದ್ಯಾಪುರ, ಪತ್ರಕರ್ತ ಸಿಶೇ ಕಜೆಮಾರ್, ಪುಣಚ ಪಂಚಾಯತ್ ಉದ್ಯೋಗಿ ಮಮತಾ ಕಜೆಮಾರ್, ಚಾರ್ವಿ ಕಜೆಮಾರ್ ಮತ್ತಿತರರು ಉಪಸ್ಥಿತರಿದ್ದರು.



ಜನ್ಮ ಕ್ರಿಯೇಷನ್ಸ್ ಡಾ| ಹರ್ಷ ಕುಮಾರ್ ರೈ ಮಾಡಾವು ನಿರ್ಮಾಣದಲ್ಲಿ ಮೂಡಿ ಬಂದಿರುವ ಆಲ್ಬಮ್ ಸಾಂಗ್ ಗೆ ಪತ್ರಕರ್ತ ಸಿಶೇ ಕಜೆಮಾರ್ ಸಾಹಿತ್ಯ, ನಿರ್ದೇಶನ, ಕರುನಾಡ ಗಾನ ಗಂಧರ್ವ, ಚಲನಚಿತ್ರ ಹಿನ್ನೆಲೆ ಗಾಯಕ ಮಿಥುನ್ ರಾಜ್ ವಿದ್ಯಾಪುರ ಧ್ವನಿ ನೀಡಿದ್ದಾರೆ. ಕಬಕ ಶ್ರೀ ರಾಜ್ ಮ್ಯೂಸಿಕ್ ವರ್ಲ್ಡ್ ನಲ್ಲಿ ಹಾಡಿನ ರೆಕಾರ್ಡಿಂಗ್ ಮತ್ತು ಮಾಸ್ಟರಿಂಗ್ ನಡೆದಿದ್ದು ಬಂಟ್ವಾಳದ ಧೀರಜ್ ಪಿ.ಎಸ್.ಕೆ ರವರ ಎಸ್.ಕೆ ಸ್ಟುಡಿಯೋದಲ್ಲಿ ಎಡಿಟಿಂಗ್ ನಡೆದಿದೆ. ಮಮತಾ ಕಜೆಮಾರ್, ಎಪಿಪಿ ಜನಾರ್ಧನ್ ಬಿ ಪುತ್ತೂರು, ಅಶ್ವಿನಿ ಕುಮಾರ್ ಪುತ್ತೂರು ಪೋಸ್ಟರ್ ಡಿಸೈನಿಂಗ್ ಈ ಹಾಡಿಗಿದೆ. ಪುತ್ತೂರು ಸುದ್ದಿ ಯೂಟ್ಯೂಬ್ ಚಾನೆಲ್ ನಲ್ಲಿ ಈ ವಿಡಿಯೋ ಆಲ್ಬಮ್ ಸಾಂಗ್ ವೀಕ್ಷಕರಿಗೆ ಲಭ್ಯವಾಗಲಿದೆ.

ಡಾ| ಹರ್ಷ ಕುಮಾರ್ ರೈ ಮಾಡವುರವರ ‘ಜನ್ಮ ಕ್ರಿಯೇಷನ್ಸ್’ ಸಂಸ್ಥೆ ಹೊಸ ಪ್ರತಿಭೆಗಳನ್ನು, ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಅವರಿಗೆ ವೇದಿಕೆ ಕೊಟ್ಟು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ದೇಶಾಭಿಮಾನ ಜೊತೆಗೆ ದೇಶ ಭಕ್ತಿ ಸಾರುವ ಮತ್ತು ಭಕ್ತಿ ಗೀತೆಗಳು, ಹಲವು ಕಿರು ಚಿತ್ರಗಳು, ಆಲ್ಬಮ್ ಹಾಡು ಮತ್ತು ಧ್ವನಿಮುದ್ರಿಕೆಗಳನ್ನು ನಿರ್ಮಾಣ ಮಾಡಿ ದೇಶ ವಿದೇಶಗಳಲ್ಲಿ ಬಿಡುಗಡೆಗೊಳಿಸಿದ ಕೀರ್ತಿ ಜನ್ಮ ಕ್ರಿಯೇಷನ್ಸ್ ಸಂಸ್ಥೆಗಿದೆ. ಧಾರ್ಮಿಕ ಕ್ಷೇತ್ರದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿ ಜಾಗತಿಕ ಹಿಂದೂ ಫೌಂಡೇಶನ್ ನಿಂದ ಪ್ರಶಂಸೆ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ತ್ರಿವರ್ಣ, ಜೈ ಭಾರತಾಂಬೆ ಹಾಗೂ ಅಷ್ಟ ಕ್ಷೇತ್ರ ಗಾನ ವೈಭವ ಇತ್ಯಾದಿ ಹಲವು ಕಿರು ಚಿತ್ರಗಳು, ಆಲ್ಬಮ್ ಸಾಂಗ್ ಈ ಸಂಸ್ಥೆಯ ಮೂಲಕ ನಿರ್ಮಾಣಗೊಂಡಿದೆ. ಇದೀಗ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಪ್ರಯುಕ್ತ ಶ್ರೀ ದೇವರ ಬಗ್ಗೆ ಸಾಹಿತ್ಯವಿರುವ ಪುತ್ತೂರ್ದ ಲಿಂಗನಾಥ ಎನ್ನುವ ವಿಡಿಯೋ ಆಲ್ಬಮ್ ಗೀತೆ ಕೂಡ ಜನ್ಮ ಕ್ರಿಯೇಷನ್ಸ್ ಮೂಲಕ ಬಿಡುಗಡೆಗೊಂಡಿದೆ.

























































































































