
ಡಿ.ಡಿ ಪ್ರೊಡಕ್ಷನ್ ಲಾಂಛನದಲ್ಲಿ ರಂಜಿತ್ ಸಿ ಬಜಾಲ್ ನಿರ್ದೇಶನದಲ್ಲಿ ಡೋಲ್ಪಿ ಡಿ’ಸೋಜ ನಿರ್ಮಾಣದಲ್ಲಿ ತಯಾರಾದ ’90 ಎಂಎಲ್’ ತುಳು ಚಲನಚಿತ್ರ ಶುಕ್ರವಾರ ಭಾರತ್ ಸಿನಿಮಾಸ್ ನಲ್ಲಿ ತೆರೆ ಕಂಡಿತು. ದೀಪ ಬೆಳಗಿಸುವ ಮೂಲಕ ಸಿನಿಮಾ ಉದ್ಘಾಟನೆ ನೆರವೇರಿಸಿ ಮಾತಾಡಿದ ಬೆಂಜನಪದವು ಕೊರಗಜ್ಜ ಕ್ಷೇತ್ರದ ವಿಜಯ ಅವರು ‘ತುಳುವಿನಲ್ಲಿ ಸದಭಿರುಚಿಯ ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ಖುಷಿಯ ವಿಚಾರ. ಇಂದು ಬಿಡುಗಡೆಯಾಗುತ್ತಿರುವ 90 ಎಂಎಲ್ ಸಿನಿಮಾ ತುಳು ಪ್ರೇಕ್ಷಕರ ಮನೆ ಮನ ಮುಟ್ಟುವ ಕೆಲಸ ಮಾಡಲಿ. ಇಡೀ ಚಿತ್ರತಂಡಕ್ಕೆ ಶುಭವಾಗಲಿ’ ಎಂದರು. ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತಾಡಿ, ‘ಸಿನಿಮಾದ ಟ್ರೈಲರ್ ನೋಡಿದೆ. ಮಲಯಾಳಂ ಚಿತ್ರದಂತೆ ಇದೆ. ಟೈಟಲ್ ಕೂಡ ಸಖತ್ತಾಗಿದೆ ಎಲ್ಲರಿಗೂ ಶುಭವಾಗಲಿ’ ಎಂದರು. ಲಾಂಚುಲಾಲ್ ಕೆ.ಎಸ್. ಮಾತನಾಡಿ, ’90 ಎಂಎಲ್ ಸಿನಿಮಾ ಟೈಟಲ್ ಡಿಫರೆಂಟ್ ಆಗಿದೆ. ತುಳುವರು ಸಿನಿಮಾ ನೋಡಿದರೆ ಖಂಡಿತ ಸಿನಿಮಾ ಗೆಲ್ಲಲಿದೆ. ಸಿನಿಮಾಕ್ಕೆ ಶುಭ ಹಾರೈಕೆಗಳು’ ಎಂದರು.


ನಟ ಅರ್ಜುನ್ ದೇವ್ ಮಾತನಾಡಿ, ’90 ಎಂಎಲ್ ನಿಜ ಜೀವನದಿಂದ ದೂರವಿರಲಿ, ಆದರೆ ಸಿನಿಮಾ ನಮಗೆಲ್ಲರಿಗೂ ಹತ್ತಿರವಿರಲಿ. ಚಿತ್ರತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ’ ಎಂದರು.
ಕಾರ್ಯಕ್ರಮದಲ್ಲಿ ನಿರ್ಮಾಪಕ ಡೋಲ್ಪಿ ಡಿ’ಸೋಜ, ಸ್ವರಾಜ್ ಶೆಟ್ಟಿ, ಸಿದ್ಧಾರ್ಥ್, ತ್ರಿಶೂಲ್ ಶೆಟ್ಟಿ, ಆನಂದ್ ಕುಂಪಲ, ಜಗನ್ನಾಥ ಶೆಟ್ಟಿ ಬಾಳ, ಮೋಹನ್ ಕೊಪ್ಪಲ, ವಿನೀತ್ ಕುಮಾರ್, ರುಹಾನಿ ಶೆಟ್ಟಿ, ರೋಶನ್ ಶೆಟ್ಟಿ, ಶೈಲಶ್ರೀ, ಧೃತಿ, ನಿರ್ದೇಶಕ ರಂಜಿತ್ ಸಿ ಬಜಾಲ್, ತುಳಸಿದಾಸ್ ಮಂಜೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.
ವಿಜೆ ಮಧುರಾಜ್ ಕಾರ್ಯಕ್ರಮ ನಿರೂಪಿಸಿದರು. 90 ಎಂಎಲ್ ಸಿನಿಮಾದಲ್ಲಿ ವಿನೀತ್ ಕುಮಾರ್, ರುಹಾನಿ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ರೋಶನ್ ಶೆಟ್ಟಿ, ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರು, ನಮಿತ, ಶೈಲಾಶ್ರೀ, ಶಿಲ್ಪಾ ಆರ್ ಶೆಟ್ಟಿ, ಧೃತಿ ನಟಿಸಿದ್ದಾರೆ. ರಂಜಿತ್ ಸಿ ಬಜಾಲ್ ಕಥೆ, ಚಿತ್ರಕಥೆ, ನಿರ್ದೇಶನ ಮಾಡಿದ್ದು, ಸಂಭಾಷಣೆ ತುಳಸಿದಾಸ್ ಮಂಜೇಶ್ವರ್, ಛಾಯಾಗ್ರಾಹಣ ಅರ್ಜುನ್ ಎಂವಿ, ಸಂಗೀತ ಸೃಜನ್ ಕುಮಾರ್ ತೋನ್ಸೆ, ಸಂಕಲನ ಸಚಿನ್ ರಾಮ್, ಡಿಸೈನ್ ಆಚಾರ್ಯ ಗುರು ಇವರದ್ದಾಗಿದೆ. 90 ಎಂಎಲ್ ತುಳು ಸಿನಿಮಾ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ, ಹಾಸ್ಯ ಮನರಂಜನೆಯೊಂದಿಗೆ ಉತ್ತಮ ಕತೆಯನ್ನು ಒಳಗೊಂಡಿದೆ.

























































































































