
ವಿಶ್ವ ಆರೋಗ್ಯ ದಿನ 2026 ಪ್ರಯುಕ್ತ ಕಾರ್ಕಳದ ರೋಟರಿ ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ‘ಆರೋಗ್ಯ ಜಾಗೃತಿ ಶಿಕ್ಷಣ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ರೋಟರಿ ಟಿ.ಎಂ.ಎ ಪೈ ಆಸ್ಪತ್ರೆಯ ಫಿಸಿಷಿಯನ್ ಡಾ. ಸೂರಜ್ ರಾವ್ ಎಚ್ ಅವರು ಭಾಗವಹಿಸಿ ಆರೋಗ್ಯದ ಮಹತ್ವ, ಜೀವನಶೈಲಿ ಬದಲಾವಣೆಗಳು ಹಾಗೂ ಸಮಕಾಲೀನ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.


ಕಾರ್ಯಕ್ರಮದ ಆರಂಭದಲ್ಲಿ ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ರೋಟೇರಿಯನ್ ಕೆ. ನವೀನ್ ಚಂದ್ರ ಶೆಟ್ಟಿಯವರು ಪ್ರಸ್ತಾವನಾ ಮಾತುಗಳನ್ನಾಡಿ, ಎಲ್ಲರನ್ನೂ ಸ್ವಾಗತಿಸಿದರು. ನಂತರ ಪಿಡಿಜಿ ಡಾ. ಭರತೇಶ ಆದಿರಾಜ್ ಅವರು ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಮಕ್ಕಳ ತಜ್ಞರಾದ ಡಾ. ಆಶಾ ಪಿ ಹೆಗಡೆ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜೆಸಿಐ ಕಾರ್ಕಳದ ಅಧ್ಯಕ್ಷರಾದ ಜೆಸಿ ಅವಿನಾಶ್ ಜಿ ಶೆಟ್ಟಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ರೋಟರಿ ಕ್ಲಬ್ ರಾಕ್ ಸಿಟಿಯ ಅಧ್ಯಕ್ಷರಾದ ರೋಟೇರಿಯನ್ ಸುರೇಂದ್ರ ನಾಯಕ್ ಅವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಆಸ್ಪತ್ರೆಯ ಎಎಂಓ ಅನುಷಾ ಪ್ರಭು ಅವರು ಸುಸೂತ್ರವಾಗಿ ನಿರೂಪಿಸಿದರು. ಈ ಕಾರ್ಯಕ್ರಮವು ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.

























































































































