
ಇತ್ತೀಚೆಗೆ ನವಿ ಮುಂಬಯಿಯ ಬಂಟ್ಸ್ ಸೆಂಟರ್ ನ ಸಭಾಗೃಹದಲ್ಲಿ ನಡೆದ ಶಿವಾಯ ಫೌಂಡೇಶನ್ ನ ಎಂಟನೇ ವಾರ್ಷಿಕೋತ್ಸವದಲ್ಲಿ ಗೌರವ ಅತಿಥಿಯಾಗಿ ಆಗಮಿಸಿದ ಮುಂಬಯಿಯ ಯಶಸ್ವೀ ಉದ್ಯಮಿ, ಸಮಾಜಸೇವಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ರಮೇಶ ಶೆಟ್ಟಿ ಸಿದ್ದಕಟ್ಟೆ ಅವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು. ಈ ಸಂಧರ್ಭ ಶಿವಾಯ ಫೌಂಡೇಶನ್ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಪಲಿಮಾರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.



























































































































