
ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಬಂಟರ ಸಂಘ ಪುತ್ತೂರು ತಾಲೂಕು ಇವರ ಮಾರ್ಗದರ್ಶನದೊಂದಿಗೆ ಪುತ್ತೂರು ಬಂಟರ ಮಹಿಳಾ ವಿಭಾಗ ಇವರ ಸಾರಥ್ಯದಲ್ಲಿ ಯುವ ಬಂಟರ ವಿಭಾಗ, ವಿದ್ಯಾರ್ಥಿ ಬಂಟರ ವಿಭಾಗ ಇವರ ಸಹಯೋಗದೊಂದಿಗೆ ‘ಐಸಿರಿ -2026’, ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಮಾರ್ಚ್ 22 ರಂದು ಪುತ್ತೂರು ಕೊಂಬೆಟ್ಟು ಎಂ ಸುಂದರರಾಮ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರುಗಲಿದ್ದು, ಪೂರ್ವಾಹ್ನ ಗಂಟೆ 10:30 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕಿ ಭಾರತಿ ಶೆಟ್ಟಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ವಹಿಸಲಿದ್ದಾರೆ. ಆಸರೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಆಶಾಜ್ಯೋತಿ ರೈ ಅವರು ಸನ್ಮಾನ ಸಮಾರಂಭವನ್ನು ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಮಾಜಿ ಅಧ್ಯಕ್ಷ ಕೆ ಸೀತಾರಾಮ ರೈ ಸವಣೂರು, ಬಂಟರ ಯಾನೆ ನಾಡವರ ಮಾತ್ರ ಸಂಘ ಮಂಗಳೂರು ಇದರ ಪುತ್ತೂರು ತಾಲೂಕು ಸಂಚಾಲಕ ದುರ್ಗಾ ಪ್ರಸಾದ್ ರೈ ಕುಂಬ್ರ, ಬಂಟರ ಮಹಿಳಾ ವಿಭಾಗದ ವಿಶೇಷ ಆಹ್ವಾನಿತರಾದ ಸುಮಾ ಅಶೋಕ್ ಕುಮಾರ್ ರೈ ಅವರು ಭಾಗವಹಿಸಲಿದ್ದಾರೆ.

ಪುತ್ತೂರು ಫಿಲೋಮಿನ ಸ್ವಾಯತ್ತ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ|ಭಾರತಿ ಎಸ್ ರೈ ಅವರು ಆಶಯ ಭಾಷಣ ಮಾಡಲಿದ್ದಾರೆ. ಬಂಟರ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆಯರುಗಳಾದ ಕುಮದಾ ಎಲ್.ಎನ್ ಶೆಟ್ಟಿ, ಮೀರಾ ಭಾಸ್ಕರ್ ರೈ, ನಿಕಟಪೂರ್ವ ಅಧ್ಯಕ್ಷೆ ಸಬಿತಾ ಭಂಡಾರಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಬಂಟರ ಯುವ ವಿಭಾಗದ ಅಧ್ಯಕ್ಷ ಭಾಗ್ಯೇಶ್ ರೈ, ಬಂಟರ ವಿದ್ಯಾರ್ಥಿ ವಿಭಾಗದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳತಡ್ಡರವರು ಗೌರವ ಉಪಸ್ಥಿತಿ ಇರುತ್ತಾರೆ ಎಂದು ಅಧ್ಯಕ್ಷೆ ಗೀತಾ ಮೋಹನ್ ರೈ ತಿಳಿಸಿದರು.


























































































































