
ಯಾವುದೇ ರೀತಿಯ ಸಂಕಷ್ಟ ಎದುರಾದರೂ ಕನ್ನಡಿಗರು ಜಾತಿ, ಧರ್ಮವನ್ನು ಬದಿಗಿಟ್ಟು ನಾವು ಒಂದಾಗಿ ಎದುರಿಸೋಣ. ಅದಕ್ಕೆ ಬೇಕಾದ ಎಲ್ಲಾ ರೀತಿಯ, ಸಹಾಯ, ಸಹಕಾರ ನೀಡಗಳಾಗುವುದೆಂದು ಖ್ಯಾತ ಆನಿವಾಸಿ ಉದ್ಯಮಿ ಡಾ| ರೋನಾಲ್ಡ್ ಕೊಲಾಸೊ ಹೇಳಿದ್ದಾರೆ. ದುಬೈಯಲ್ಲಿರುವ ಅವರ ನಿವಾಸದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನ್ ಗಾಗಿ ಕೂಟದಲ್ಲಿ ಆಯೋಜಿಸಲಾಗಿದ್ದ ‘ಸೌಹಾರ್ದ ಇಫ್ತಾರ್’ ಕೂಟದಲ್ಲಿ ಅವರು ಮಾತನಾಡುತ್ತಿದ್ದರು. ನಾವು ಸಂಕಷ್ಟದ ವೇಳೆ ಮಾತ್ರವಲ್ಲ, ಬದಲಾಗಿ ಎಲ್ಲಾ ಸಂದರ್ಭಗಳಲ್ಲೂ ಒಟ್ಟಾಗಿ ಸೌಹಾರ್ದತೆ, ಒಗ್ಗಟ್ಟಿನಿಂದ ಇಲ್ಲಿ ಜೀವಿಸೋಣ ಎಂದು ಡಾ| ಕೊಲಾಸೊ ಕರೆ ನೀಡಿದರು. ಸಂಕಷ್ಟದಲ್ಲಿದ್ದ ಪ್ರವಾಸಿ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿಸಲು ನೀವೆಲ್ಲರೂ ಸಂಯೋಜಕರಾಗಿ ಕೆಲಸ ಮಾಡುವ ಮೂಲಕ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದೀರಿ. ‘ಕನ್ನಡಿಗಾಸ್ ಹೆಲ್ಪ್ ಲೈನ್’ನ ಈ ಯಶಸ್ಸು ನಿಮಗೆ ಸಲ್ಲಬೇಕಾದದ್ದು. ಇಲ್ಲಿರುವ ಪ್ರತಿಯೊಬ್ಬರಿಗೂ ಸಲ್ಲಬೇಕಾಗಿರುವಂತದ್ದು ಎಂದ ಕೊಲಾಸೊ, ಈ ಹಿಂದೆ ಇಲ್ಲಿ ಪ್ರವಾಹ ಬಂದಾಗ, ಕರೋನ ಸಂಕಷ್ಟ ಎದುರಾದಾಗ ಮಾಡಿದ ರೀತಿಯಲ್ಲಿಯೇ ಈ ಬಾರಿಯೂ ‘ಕನ್ನಡಿಗಾಸ್ ಹೆಲ್ಪ್ ಲೈನ್’ ಕಾರ್ಯವೆಸಗಿದ್ದು ಇದು ನಮ್ಮನ್ನು ಇನ್ನಷ್ಟು ಹುರಿದುಂಬಿಸಿದೆ ಎಂದರು.

ಯುಎಇಯಲ್ಲಿ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವದಂತಹ ಕಾರ್ಯಕ್ರಮಗಳನ್ನು ಶಾಲೆ, ಕಾಲೇಜು, ಕಚೇರಿ ಇನ್ನಿತರ ಕಡೆಗಳಲ್ಲಿ ಬೇರೆ ಬೇರೆಯಾಗಿ ನಾವು ಆಚರಿಸಿದರೂ ಕರ್ನಾಟಕ ರಾಜ್ಯೋತ್ಸವವನ್ನು ಮಾತ್ರ ಪ್ರತಿವರ್ಷ ಕನ್ನಡಿಗರು ಕನ್ನಡಪರ ಸಂಘಟನೆಗಳು ಒಟ್ಟು ಸೇರಿ ಒಂದೆಡೆ ಆಚರಿಸುವಂತಾಗಬೇಕು. ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹಲವು ಸಂಘಟನೆಗಳು ಹಲವು ಮಂದಿ ಅತಿಥಿಗಳನ್ನು ಕರೆಯುವ ಬದಲು ಒಂದೇ ವೇದಿಕೆಯ ಮೂಲಕ ಅತಿಥಿಗಳನ್ನು ಕರೆದು ಕಾರ್ಯಕ್ರಮವನ್ನು ಇನ್ನಷ್ಟು ಅದ್ದೂರಿಯಾಗಿ ನಡೆಸಬಹುದಾಗಿದೆ. ಇದಕ್ಕೆಲ್ಲ ಕನ್ನಡಿಗರು ಕೈಜೋಡಿಸಬೇಕು ಎಂದರು. ಹಿದಾಯತ್ ಅಡ್ಡೂರು ‘ಕನ್ನಡಿಗಾಸ್ ಹೆಲ್ಪ್ ಲೈನ್’ನ್ನು ಆರಂಭಿಸುವ ಮೂಲಕ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಸಹಾಯ ಹಸ್ತ ಚಾಚಿದ್ದಾರೆ. ನನಗೆ ಇದರ ನೇತೃತ್ವ ನೀಡಿದ್ದರೂ ಅದರ ಹಿಂದೆ ಓಡಾಡುತ್ತಿರುವುದು, ಜನರೊಂದಿಗೆ ಸ್ಪಂದಿಸುತ್ತಿರುವುದು ಹಿದಾಯತ್ ಅಡ್ಡೂರು. ಅವರ ಸೇವೆ ಮಹತ್ತರ ಎಂದು ಡಾ| ಕೊಲಾಸೊ ಶ್ಲಾಘಿಸಿದರು.
ಅಬುದಾಭಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ ಮಾತನಾಡಿ, ರೊನಾಲ್ಡ್ ಕೊಲಾಸೊ ಕರ್ನಾಟಕದಲ್ಲಿ ಕೋರ್ಟ್, ಪೊಲೀಸ್ ಠಾಣೆ ನಿರ್ಮಿಸಿಕೊಟ್ಟಿದ್ದಾರೆ, ಪಾಳು ಬಿದ್ದ ಹಲವಾರು ಶಾಲೆಗಳ ದುರಸ್ತಿ ಕಾರ್ಯ ನೆರವೇರಿಸಿದ್ದಾರೆ. ದೇವಸ್ಥಾನ ಮಸೀದಿ ಚರ್ಚ್ ಕಟ್ಟಲು ಸಹಾಯ ಮಾಡಿದ್ದಾರೆ. ಇಂತಹ ಹಲವಾರು ಸಾಮಾಜಿಕ, ಮಾನವೀಯ ಸೇವೆಗಳನ್ನು ನೀಡುವ ಮೂಲಕ ಕೊಲೊಸೊ ನೇತೃತ್ವದಲ್ಲಿ ‘ಕನ್ನಡಿಗಾಸ್ ಹೆಲ್ಪ್ ಲೈನ್’ನ್ನು ಹಿದಾಯತ್ ಅಡ್ಡೂರು ಕನ್ನಡಿಗರಿಗಾಗಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ‘ಕನ್ನಡಿಗಾಸ್ ಹೆಲ್ಪ್ ಲೈನ್’ ಸಂಯೋಜಕ ಹಿದಾಯತ್ ಅಡ್ಡೂರು ಮಾತನಾಡಿ, ನಮ್ಮ ಜೊತೆ ಎಲ್ಲಾ ಕನ್ನಡಿಗರು ಕೈ ಜೋಡಿಸಿರುವುದರಿಂದ ನಾವು ಸಂಕಷ್ಟದ ವೇಳೆ ಸಹಾಯ, ಸಹಕಾರ ನೀಡಲು ಸಾಧ್ಯವಾಗಿದೆ. ಡಾ| ರೊನಾಲ್ಡ್ ಕೊಲಾಸೊ ನಮಗೆ ಬೆನ್ನೆಲುಬಾಗಿ ನಿಂತು ಸಹಕಾರ ನೀಡಿದ್ದರಿಂದಲೇ ಇದು ಸಾಧ್ಯವಾಯಿತು ಎಂದರು. ಈ ಸಂದರ್ಭದಲ್ಲಿ ‘ಕನ್ನಡಿಗಾಸ್ ಹೆಲ್ಪ್ ಲೈನ್’ ವತಿಯಿಂದ ಗಣ್ಯರೆಲ್ಲರೂ ಸೇರಿ ಡಾ| ರೊನಾಲ್ಡ್ ಕೊಲಾಸೊ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಸೌಹಾರ್ದ ಇಫ್ತಾರ್ ಕೂಟದಲ್ಲಿ ಕರ್ನಾಟಕ ಎನ್.ಆರ್.ಐ ಫೋರಂ ಅಧ್ಯಕ್ಷ ವಕ್ವಾಡಿ ಪ್ರವೀಣ್ ಶೆಟ್ಟಿ, ದುಬೈ ಕರ್ನಾಟಕ ಸಂಘ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ಹಿರಿಯರಾದ ಜೇಮ್ಸ್ ಮೆಂಡೋನ್ಸಾ, ದುಬೈ ಕನ್ನಡಿಗರ ಕೂಟದ ಅಧ್ಯಕ್ಷ ಅರುಣ್ ಕುಮಾರ್, ಯುಎಇ ಬಿಸಿಸಿಐಯ ಅಶ್ರಫ್ ಶಾಮಾಂತೂರು, ಮುಷ್ತಾಕ್ ಕದ್ರಿ, ಸಲೀಂ ಮೂಡುಬಿದಿರೆ, ಮಲ್ಲಿಕಾರ್ಜುನ ಗೌಡ, ಒಕ್ಕಲಿಗರ ಸಂಘ ದುಬೈಯ ಯತೀಶ್ ಗೌಡ, ಕಿರಣ್ ಗೌಡ, ಶಾರ್ಜಾ ಕರ್ನಾಟಕ ಸಂಘದ ಸುಗಂಧರಾಜ ಬೇಕಲ್, ದುಬೈ ಕನ್ನಡ ಪಾಠಶಾಲೆಯ ಗವಾಸ್ಕರ್, ಸಿದ್ದು ನಾಗರಾಜ್ ರಾವ್, ಹಿದಾಯ ಫೌಂಡೇಶನ್ ನ ಆಸಿಫ್ ಕನ್ನಂಗಾರ್, ಬದ್ರಿಯಾ ಫ್ರೆಂಡ್ಸ್ ಯುಎಇ ಅಧ್ಯಕ್ಷ ಮಹಮ್ಮದ್ ಆಶಿಕ್, ಇಮ್ರಾನ್ ಎರ್ಮಾಳ್, ಮಂಕಿ ಕಮ್ಯುನಿಟಿಯ ಫೈಝನ್ ಸೌಧ, ರಾಜೇಶ್ ಸಿಕ್ವೇರಾ, ನಾಸಿರ್ ಕಾರಾಜೆ, ಅನ್ವರ್ ಮನಿಲಾ, ನವಾಜ್ ಕೋಟೆಕಾರ್, ನವಾಜ್ ಬಿ.ಸಿ ರೋಡ್, ನವಾಜ್ ಗೋಳ್ತಮಜಲು, ದಯಾ ಕಿರೋಡಿಯನ್ ಮತ್ತಿತರರು ಹಾಜರಿದ್ದರು.


























































































































