
ತುಳುನಾಡ ಸೇವಾ ಸಮಾಜ ಮೀರಾ ಭಯಂದರ್ ಇದರ ಸ್ಥಾಪಕ ದಿನಾಚರಣೆ, ಮಹಿಳಾ ದಿನಾಚರಣೆ ಹಾಗೂ ಹಳದಿ ಕುಂಕುಮ ಕಾರ್ಯಕ್ರಮದ ನಿಮಿತ್ತ ಮಾರ್ಚ್ 15 ರಂದು ನಡೆದ ಕಾರ್ಯಕ್ರಮದಲ್ಲಿ ಶ್ರೀ ಶಕ್ತಿ ಫೌಂಡೇಶನ್ ನ ಸ್ಥಾಪಕಾಧ್ಯಕ್ಷೆ ಶ್ರೀಮತಿ ಸಚ್ಚೇರಿಗುತ್ತು ಶಾಲಿನಿ ಎಸ್ ಶೆಟ್ಟಿಯವರಿಗೆ ‘ಸಂಘಟನಾ ಐಸಿರಿ’ ಎಂಬ ಬಿರುದನ್ನು ಪ್ರದಾನಿಸಿ ಸನ್ಮಾನಿಸಿದರು. ಈ ಸಂಧರ್ಭ ಸುರೇಂದ್ರ ಹೆಗ್ಗಡೆ, ಯೋಗೀಶ್ ಗಾಣಿಗ, ಸಂಪತ್ ಶೆಟ್ಟಿ ಪಂಜದಗುತ್ತು, ರವೀಂದ್ರ ಶೆಟ್ಟಿ ಕೊಟ್ರಪಾಡಿ, ನರೇಶ್ ಕೆ ಪೂಜಾರಿ, ಡಾ| ಕೆ.ಟಿ ಶಂಕರ್ ಶೆಟ್ಟಿ, ಶಂಭು ಕೆ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.




























































































































