

ಥಾಣೆ ಬಂಟ್ಸ್ ಅಸೋಸಿಯೇಷನ್, ಮುಲುಂಡ್ ಬಂಟ್ಸ್, ಥಾಣೆ ಹೋಟೆಲ್ ಅಸೋಸಿಯೇಷನ್ ಸಹಯೋಗದೊಂದಿಗೆ ಬಂಟ್ಸ್ ಲಾ ಫೋರಮ್ ಮಾರ್ಚ್ 14 ರಂದು ನಡೆಸಿದ ಕಾನೂನು ಕಾರ್ಯಾಗಾರ ಸಮಾವೇಶದಲ್ಲಿ ಅಡ್ವೋಕೇಟ್ ಹರ್ಷವರ್ಧನ್ ಮೇಲಂಟ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಥಾಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಎಂ ಶೆಟ್ಟಿ, ಮುಲುಂಡ್ ಬಂಟ್ಸ್ ಅಧ್ಯಕ್ಷ ಸಿಎ ಕರುಣಾಕರ ಶೆಟ್ಟಿ, ಥಾಣೆ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪೊಲ್ಯ ಉಮೇಶ್ ಶೆಟ್ಟಿ ಈ ಸಂಧರ್ಭ ಉಪಸ್ಥಿತರಿದ್ದರು.


























































































































