
ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗವು ಮಾರ್ಚ್ 7 ರಂದು ಶನಿವಾರ ಅಪರಾಹ್ನ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾರ್ಗದರ್ಶನ, ಮಹಿಳಾ ವಿಭಾಗದ ಅಧ್ಯಕ್ಷೆ ಚಿತ್ರಾ ಆರ್ ಶೆಟ್ಟಿ ಮುಂದಾಳತ್ವದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ವಿಶ್ವ ಮಹಿಳಾ ದಿನಾಚರಣೆ ಅದ್ದೂರಿಯಾಗಿ ಸಂಭ್ರಮಿಸಿತು. ಅಧ್ಯಕ್ಷ ಪ್ರವೀಣ್ ಬಿ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲಾದ ಸಮಾರಂಭದಲ್ಲಿ ಭಾರತ್ ಕಾಲೇಜ್ ಆಫ್ ಇಂಜಿನಿಯರಿಂಗ್ (ಬದ್ಲಾಪುರ) ಇದರ ಸ್ಥಾಪಕ ಟ್ರಸ್ಟಿ ಪ್ರೊ| ಶುಭಲಕ್ಷ್ಮೀ ಸುದರ್ಶನ್ ಹೆಗ್ಡೆ, ಪಾನ್ಬಾಯ್ ಇಂಟರ್ನ್ಯಾಶನಲ್ ಸ್ಕೂಲ್ (ಸಾಂತಾಕ್ರೂಜ್) ಇದರ ಆಡಳಿತ ಟ್ರಸ್ಟಿ ಮೋಹಿನಿ ಪಿ ಶೆಟ್ಟಿ ಅತಿಥಿ ಅಭ್ಯಾಗತರುಗಳಾಗಿದ್ದರು. ೨೦೨೬ನೇ ಸಾಲಿನ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸ್ಮಾರಕ ಪ್ರಶಸ್ತಿಯನ್ನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್ ಶೆಟ್ಟಿ ಅವರಿಗೆ (ಪತಿ ಸುಧಾಕರ್ ಶೆಟ್ಟಿ ಅವರನ್ನೊಳಗೊಂಡು) ಪ್ರದಾನಿಸಿ ಅಭಿನಂದಿಸಲಾಯಿತು.

ಬಂಟರ ಸಂಘದ ಉಪಾಧ್ಯಕ್ಷ ಮಹೇಶ ಎಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಗೌ| ಪ್ರ| ಕೋಶಾಧಿಕಾರಿ ಸಿಎ| ರಮೇಶ್ ಬಿ ಶೆಟ್ಟಿ, ಜತೆ ಕಾರ್ಯದರ್ಶಿ ಗಿರೀಶ್ ಆರ್ ಶೆಟ್ಟಿ ತೆಳ್ಳಾರು, ಯುವ ವಿಭಾಗದ ಕಾರ್ಯಾಧ್ಯಕ್ಷ ಸವೀನ್ ಜೆ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಕವಿತಾ ಐ.ಆರ್ ಶೆಟ್ಟಿ, ಕಾರ್ಯದರ್ಶಿ ಆಶಾ ಎಸ್ ಶೆಟ್ಟಿ, ಕೋಶಾಧಿಕಾರಿ ಸುಚಿತಾ ಕೆ ಶೆಟ್ಟಿ, ಜತೆ ಕಾರ್ಯದರ್ಶಿ ವನಿತಾ ವೈ ನೋಂಡಾ, ಜತೆ ಕೋಶಾಧಿಕಾರಿ ಸರೋಜಾ ಬಿ ಶೆಟ್ಟಿ ವೇದಿಕೆಯಲ್ಲಿದ್ದರು. ಬಂಟರ ಸಂಘದ ಮತ್ತು ಮಹಿಳಾ ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯ, ಸದಸ್ಯೆಯರು, ಸಂಘದ ವಿಶ್ವಸ್ಥ ಸದಸ್ಯರು, ಹಾಲಿ ಮಾಜಿ ಪದಾಧಿಕಾರಿಗಳು, ಉಪ ಸಮಿತಿಗಳ ಮುಖ್ಯಸ್ಥರು, ಸದಸ್ಯರನೇಕರು ಉಪಸ್ಥಿತರಿದ್ದು, ಸಂಘದ ಒಂಬತ್ತು ಪ್ರಾದೇಶಿಕ ಸಮಿತಿಗಳ ಕಲಾವಿದರು ನೃತ್ಯ ವೈವಿಧ್ಯ ಪ್ರಸ್ತುತ ಪಡಿಸಿದರು. ವಿಶೇಷ ಆಕರ್ಷಣೆಯಾಗಿಸಿ ಮಹಿಳಾ ವಿಭಾಗದ ಸದಸ್ಯೆಯರು ‘ಭವ ಸ್ವರೂಪಿಣಿ’ ನಾಟ್ಯ ವೈಭವ ಪ್ರದರ್ಶಿಸಿದರು. ಸಂಘದ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿನ (ಜ್ಞಾನ ಮಂದಿರ) ಶ್ರೀ ಮಹಾವಿಷ್ಣು, ಶ್ರೀ ಮಹಾಗಣಪತಿ, ಕಟೀಲು ಶ್ರೀ ದುರ್ಗಪರಮೇಶ್ವರಿ ದೇವರಿಗೆ ಆದಿಯಲ್ಲಿ ಪೂಜೆ ನೆರವೇರಿಸಲಾಯಿತು. ಮಂದಿರದ ಆರ್ಚಕ ವೇ| ಮೂ| ನಾಗೇಂದ್ರ ಭಟ್ ಕಡಿಯಾಳಿ ಪೂಜೆಗೈದು ಮಹಾರಾತಿಯೊಂದಿಗೆ ಪ್ರಸಾದವನ್ನಿತ್ತು ಸಂಭ್ರಮಕ್ಕೆ ಹರಸಿದರು.
ಬಂಟಗೀತೆಯೊಂದಿಗೆ ಆದಿಗೊಂಡಿದ್ದು, ಗೀತಾ ಸತೀಶ್ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಚಿತ್ರಾ ಆರ್ ಶೆಟ್ಟಿ ಸ್ವಾಗತಿಸಿದರು. ಶಿಲ್ಪಾ ಎಸ್ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಆಶಾ ಎಸ್ ಶೆಟ್ಟಿ ಮತ್ತು ಕವಿತಾ ಐ.ಆರ್ ಶೆಟ್ಟಿ ಅತಿಥಿಗಳನ್ನು ಹಾಗೂ ಸುಚಿತಾ ಕೆ.ಶೆಟ್ಟಿ ಪುರಸ್ಕೃತರನ್ನು ಪರಿಚಯಿಸಿದರು. ಶಾಲಿನಿ ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆಶಾ ಎಸ್ ಶೆಟ್ಟಿ ವಂದಿಸಿದರು.
ಚಿತ್ರ, ವರದಿ : ರೋನ್ಸ್ ಬಂಟ್ವಾಳ್


























































































































