
ಲಯನ್ಸ್ ಜಿಲ್ಲೆ 317 ಡಿಯ ಪ್ರಾಂತ್ಯ 2ರ ಪ್ರಾಂತೀಯ ಸಮ್ಮೇಳನ – 2026 ‘ಗ್ರಂಥ’ ಇದರ ಶಾಶ್ವತ ಸೇವಾ ಯೋಜನೆಗಳ ಅಂಗವಾಗಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಕದ್ರಿ ಪಾರ್ಕ್ ಬಳಿ ಪ್ರವೇಶ ದ್ವಾರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ದ್ವಾರ ಉದ್ಘಾಟಿಸಿದ ಕದ್ರಿ ಮಂಜುನಾಥ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಎ.ಜೆ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ| ಎ.ಜೆ. ಶೆಟ್ಟಿ ಅವರು ಶುಭ ಹಾರೈಸಿದರು.


ಲಯನ್ಸ್ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ್ ಶೆಣೈ, ಪ್ರಾಂತ್ಯಾಧ್ಯಕ್ಷ ಚರಣ್ ಆಳ್ವ ಚಿಪ್ಪಾರು ಗುತ್ತು, ಎರಡನೇ ಉಪ ಜಿಲ್ಲಾ ಗವರ್ನರ್ ಗೋವರ್ಧನ್ ಶೆಟ್ಟಿ, ಪ್ರಾಂತ್ಯ ಸಮ್ಮೇಳನ ಸಮಿತಿ ಅಧ್ಯಕ್ಷ ಲೋಕೇಶ್ ಉಳ್ಳಾಲ್, ಕಾರ್ಯದರ್ಶಿ ಮನೋಜ್ ಶೆಟ್ಟಿ, ಖಜಾಂಚಿ ಕುಸುಮ ಯು. ರಾವ್, ರೀಜನ್ -1 ರ ವಲಯಾಧ್ಯಕ್ಷ ನರೇಶ್ ಶೆಟ್ಟಿ, ರೀಜನ್ -2 ರ ವಲಯಾಧ್ಯಕ್ಷ ಸುನಿಲ್ ಕುಮಾರ್, ಲಯನ್ಸ್ ಕ್ಲಬ್ ಅಶೋಕನಗರ ಇದರ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಕಾರ್ಯದರ್ಶಿ ಬ್ರಿಜೇಶ್ ಶೆಟ್ಟಿ, ಖಜಾಂಚಿ ನಿಖಿಲ್ ಶೆಟ್ಟಿ, ಸ್ಥಳೀಯ ನಿಕಟಪೂರ್ವ ಕಾರ್ಪೊರೇಟರ್ ಶಕೀಲಾ ಕಾವ, ಅಶೋಕನಗರ ಲಯನ್ಸ್ ಕ್ಲಬ್ ಚಾರಿಟೇಬಲ್ ಟ್ರಸ್ಟ್ ಚೇರ್ಮನ್ ನವೀನ್ ಶೆಟ್ಟಿ ಉಪಸ್ಥಿತರಿದ್ದರು.

ಸಂಜೆ ಪಿಲಿಕುಳದ ಸ್ಕೌಟ್ಸ್ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕದ್ರಿ ದೇವಸ್ಥಾನದ ಅರ್ಚಕ ಕೃಷ್ಣ ಅಡಿಗ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಾಗ್ಮಿ ದಾಮೋದರ ಶರ್ಮಾ ಮುಖ್ಯ ಭಾಷಣಕಾರರಾಗಿದ್ದರು. ಮೊಂಟೆಪದವು ಸೇವಾ ಭಾರತೀಯ ಮಾಧವವನ ಕ್ಯಾಂಪಸ್ ನಲ್ಲಿ ವಿಶೇಷ ಚೇತನಾ ಮಕ್ಕಳಿಗೆ ಅಗತ್ಯವಿರುವ ಆಟೋಪಕರಣಗಳನ್ನು ಒದಗಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು.


























































































































