
ಎನ್.ಟಿ.ಎ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್À- 2026ರ ವಿಭಾಗದ ಮೊದಲ ಹಂತದ ಫಲಿತಾಂಶದಲ್ಲಿ ಜ್ಞಾನಸುಧಾದ 8 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುತ್ತಾರೆ. 1. ನಿಶಾನ್ ಎನ್. ಸಾಲ್ಯಾನ್ 99.8525917 ಪರ್ಸಂಟೈಲ್ (ಬಿ.ಆರ್ಕ್), 2. ಅನಿರುದ್ಧ್ ಆರ್ ಉಡುಪ 99.7009541 ಪರ್ಸಂಟೈಲ್ (ಬಿ.ಪ್ಲಾನ್) ಹಾಗೂ 99.1045499 ಪರ್ಸಂಟೈಲ್ (ಬಿ.ಆರ್ಕ್), 3. ಇಶಾಂತ್ ಪಾಟೀಲ್ ಜಿ.ಎಂ 99.6629800 ಪರ್ಸಂಟೈಲ್ (ಬಿ.ಪ್ಲಾನ್), 4. ಕನಿಷ್ಕ್ ಎಸ್ ಅಮಿನ್ 99.6501804 ಪರ್ಸಂಟೈಲ್ (ಬಿ.ಆರ್ಕ್) ಮತ್ತು 99.0553947 ಪರ್ಸಂಟೈಲ್ (ಬಿ.ಪ್ಲಾನ್), 5. ಪ್ರಣವ್ ಪಿ ಶೆಟ್ಟಿ 99.3164665 ಪರ್ಸಂಟೈಲ್ (ಬಿ.ಪ್ಲಾನ್), 6. ವಿದ್ವತ್ ವಿ ಕಾಮತ್ 99.2642521 ಪರ್ಸಂಟೈಲ್ (ಬಿ.ಪ್ಲಾನ್), 7. ಅಶ್ವಿನ್ ವಿ ಶೆಟ್ಟಿ 99.2215313 (ಬಿ.ಪ್ಲಾನ್) ಹಾಗೂ 8. ಶೋಧನ್ ಆರ್ ಹೆಗ್ಡೆ 99.1218493 ಪರ್ಸಂಟೈಲ್ (ಬಿ.ಪ್ಲಾನ್) ಪಡೆದಿದ್ದಾರೆ. ಬಿ.ಪ್ಲಾನಿಂಗ್ನಲ್ಲಿ 7 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲನ್ನು, ಬಿ.ಆರ್ಕ್ನಲ್ಲಿ 3 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದಾರೆ.


ಈಗಾಗಲೇ ಜೆ.ಇ.ಇ ಮೈನ್ ಬಿ.ಟೆಕ್ನಲ್ಲಿ 8 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುವುದನ್ನು ಸ್ಮರಿಸಿಕೊಳ್ಳಬಹುದು. ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

























































































































