ಇಂದಿನ ಪರಿಸರದಲ್ಲಿನ ಬದಲಾವಣೆ, ಅಹಾರ ವಸ್ತುಗಳು ಮತ್ತು ಕಲುಶಿತ ವಾತಾವರಣದಿಂದ ಮನುಷ್ಯನ ಆರೋಗ್ಯದಲ್ಲಿ ಏರುಪೇರು ಯಾವಾಗ ಬೇಕಾದರೂ ಆಗಬಹುದು. ಪ್ರತಿಯೊಬ್ಬರೂ ಆರೋಗ್ಯವಂತ ಬದುಕನ್ನು ಬಯಸುತ್ತಾರೆ. ಆದರೆ ಇಂದಿನ ಬ್ಯುಸಿ ಜೀವನದಲ್ಲಿ ಆರೋಗ್ಯದ ಕಡೆ ಗಮನ ಕೊಡಲು ಸಮಯವೇ ಸಿಗದ ಪರಿಸ್ಥಿತಿಯಲ್ಲಿ, ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾದಾಗ ಆರೋಗ್ಯದಲ್ಲಿ ಬದಲಾವಣೆ ಕೂಡಾ ಆಗುತ್ತದೆ. ಇಂತಹ ಸಮಯದಲ್ಲಿ ಅಸಡ್ಡೆ ಮಾಡದೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಅರೋಗ್ಯ ಇದ್ದರೇ ಜೀವನ ಸುಂದರವಾಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಅರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ನಿಯಮವನ್ನು ಪಾಲಿಸಬೇಕು. ನಮ್ಮ ಬಂಟ್ಸ್ ಅಸೋಸಿಯೇಷನ್ ಈ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜಿಸಿದೆ. ಆರೋಗ್ಯವೇ ಭಾಗ್ಯ ಎಂಬ ಕಾಳಜಿ ನಿಮ್ಮಲ್ಲಿರಲಿ ಎಂದು ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿಗುತ್ತು ನುಡಿದರು. ಪುಣೆ ಬಂಟ್ಸ್ ಅಸೋಸಿಯೇಷನ್ ನ ಸಮಾಜ ಕಲ್ಯಾಣ ಸೇವಾ ಕಾರ್ಯದಂಗವಾಗಿ ಗುರುನಾನಕ್ ಮೆಡಿಕಲ್ ಫೌಂಡೇಶನ್ ಸಹಯೋಗದೊಂದಿಗೆ ಸಮಾಜ ಬಾಂಧವರಿಗಾಗಿ ಮಲ್ಟಿಸ್ಪೆಷಾಲಿಟಿ ಉಚಿತ ಅರೋಗ್ಯ ತಪಾಸಣಾ ಶಿಬಿರವು ಜನವರಿ 11 ರವಿವಾರದಂದು ಗುರುನಾನಕ್ ಮೆಡಿಕಲ್ ಫೌಂಡೇಶನ್ ನ ಗುರುನಾನಕ್ ದರ್ಬಾರ್ ಹಾಲ್ (ಹಾಲಿವುಡ್ ಗುರುದ್ವಾರ) ಕ್ಯಾಂಪ್ ಪುಣೆ ಇಲ್ಲಿ ನಡೆಯಿತು. ಈ ಉಚಿತ ಅರೋಗ್ಯ ತಪಾಸಣಾ ಶಿಬಿರದಲ್ಲಿ ಮಲ್ಟಿಸ್ಪೆಷಾಲಿಟಿ ಆರೋಗ್ಯ ತಪಾಸಣೆ, ಸ್ತ್ರೀರೋಗ ಶಾಸ್ತ್ರ, ಮಕ್ಕಳ ರೋಗ ತಪಾಸಣೆ, ಕಣ್ಣು, ಹಲ್ಲು ತಪಾಸಣೆ, ಔಷದಿ ಮತ್ತು ರೋಗಶಾಸ್ತ್ರದ ಬಗ್ಗೆ ಮಾಹಿತಿ, ಸಕ್ಕರೆ ಖಾಯಿಲೆ ತಪಾಸಣೆ ನಡೆಸಲಾಯಿತು. ಈ ಶಿಬಿರವನ್ನು ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿಗುತ್ತು, ನಿಕಟಪೂರ್ವ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರ್, ಮಾಜಿ ಅಧ್ಯಕ್ಷ ಆನಂದ್ ಶೆಟ್ಟಿ ಮಿಯ್ಯಾರ್, ಶಿಬಿರದ ಸಂಯೋಜಕರಾದ ಸಂಘದ ಉಪಾಧ್ಯಕ್ಷರುಗಳಾದ ಡಾ. ಸುಧಾಕರ್ ಶೆಟ್ಟಿ, ಸತೀಶ್ ರೈ ಕಲ್ಲಂಗಳ ಗುತ್ತು, ಗುರುದ್ವಾರ ಗುರುನಾನಕ್ ದರ್ಬಾರ್ ನ ಅಧ್ಯಕ್ಷ ಸರ್ದಾರ್ ಚರಣ್ ಜೀತ್ ಸಿಂಗ್ ಶೈನಿ, ಗುರುನಾನಕ್ ಮೆಡಿಕಲ್ ಫೌಂಡೇಶನ್ ನ ಕಾರ್ಯಾಧ್ಯಕ್ಷ ಸರ್ದಾರ್ ಸಂತ್ ಸಿಂಗ್ ಮತ್ತು ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಅರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ, ಕೋಶಾಧಿಕಾರಿ ಸಿಎ ಮನೋಹರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ, ರವೀಂದ್ರ ಶೆಟ್ಟಿ, ಮಹೇಶ್ ಹೆಗ್ಡೆ ಪೊಳಲಿ, ತಾರಾನಾಥ್ ರೈ ಸೂರಂಬೈಲ್, ಅರವಿಂದ್ ರೈ, ಸುಧಾಕರ್ ಶೆಟ್ಟಿ ಕೆಮ್ತೂರ್, ಮಹಿಳಾ ಕಾರ್ಯಾಧ್ಯಕ್ಷೆ ರೇಷ್ಮಾ ಅರ್ ಶೆಟ್ಟಿ, ಮಹಿಳಾ ಕಾರ್ಯದರ್ಶಿ ಶರ್ಮಿಳಾ ಟಿ ರೈ, ಮಾಜಿ ಕಾರ್ಯಾಧ್ಯಕ್ಷೆ ದೀಪಾ ಎ ರೈ, ಪೂರ್ಣಿಮಾ ಎ ಶೆಟ್ಟಿ ಮತ್ತು ಪದಾಧಿಕಾರಿಗಳು, ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದರು. ಗುರುದ್ವಾರ ಗುರುನಾನಕ್ ದರ್ಬಾರ್ ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಶಾಲು, ಪುಷ್ಪಗುಚ್ಚ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸರ್ದಾರ್ ಚರಣ್ ಜೀತ್ ಸಿಂಗ್ ಶೈನಿ ಬಂಟ್ಸ್ ಅಸೋಸಿಯೇಷನ್ ನ ಆರೋಗ್ಯದ ಬಗ್ಗೆ ಕಾಳಜಿಯಿಂದ ಆಯೋಜಿಸಿದ್ದ ಕಾರ್ಯವನ್ನು ಶ್ಲಾಘಿಸಿ ಶುಭ ಕೋರಿದರು. ಈ ಅರೋಗ್ಯ ತಪಸಣಾ ಶಿಬಿರದ ವೈದ್ಯಕೀಯ ಸಲಹೆಗಾರರ ಬೋರ್ಡ್ ನ ಪ್ರಮುಖರಾದ ಡಾ. ಚಿತ್ತರಂಜನ್ ಶೆಟ್ಟಿ, ಡಾ. ಸಂಜಯ್ ಕುಲಕರ್ಣಿ, ಡಾ. ಸುಜಯ್ ಹೆಗ್ಡೆ, ಡಾ. ಜ್ಯೋತಿ ಶೆಟ್ಟಿ, ಡಾ. ಪ್ರವೀಣ್ ಅರ್ ಶೆಟ್ಟಿ, ಡಾ. ವಿವೇಕ್ ಹೆಗ್ಡೆ, ಡಾ. ಸಂಜಯ್ ತೆಕವಡೆಯವರ ಸಲಹೆಯೊಂದಿಗೆ ಪುಣೆಯ ಖ್ಯಾತ ವೈದ್ಯರುಗಳಾದ ಡಾ. ಚಿತ್ತರಂಜನ್ ಶೆಟ್ಟಿ, ಡಾ. ಸುಧಾಕರ್ ಶೆಟ್ಟಿ, ಡಾ. ಉರ್ವಿ ಕೊಥಾರಿ, ಡಾ. ರೋಬರ್ಟ್ ಲೋಬೊ, ಡಾ. ವಿಕಾಸ್ ಮಂತೋಲೆ, ಡಾ. ಸಮಿತಾ ಮೂಲಾನಿ, ಡಾ. ಸತ್ಯಶೀಲ ನ್ಯಾ ಕ್ ರವರು ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಸಲಹೆ ನೀಡಿದರು. ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು ಹಾಗೂ ಎಲ್ಲಾ ಸಮಾಜದ ಬಾಂಧವರು ವಿವಿಧ ವಿಭಾಗಗಳಲ್ಲಿ ಮತ್ತು ಹಲವಾರು ರೀತಿಯ ಅರೋಗ್ಯ ತಪಾಸಣೆ ಮಾಡಿಸಿಕೊಂಡರು ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದರು.
ಚಿತ್ರ, ವರದಿ : ಹರೀಶ್ ಮೂಡುಬಿದ್ರಿ

















































































































