ಪುತ್ತೂರು ತಾಲೂಕು ಜಾನಪದ ಸಾಹಿತ್ಯ ವೇದಿಕೆಯ ನೂತನ ಅಧ್ಯಕ್ಷರಾಗಿ ಕೆ.ಎಸ್ ರವೀಂದ್ರನಾಥ ರೈ ಬಳ್ಳಮಜಲುಗುತ್ತು ಅವರನ್ನು ಆಯ್ಕೆ ಮಾಡಲಾಗಿದೆ. ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಲೇಖಕ ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ, ಸಂಚಾಲಕರಾಗಿ ಪತ್ರಕರ್ತ ಉಮಾಪ್ರಸಾದ್ ರೈ ನಡುಬೈಲುರವರುಗಳು ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಎಸ್ ರವೀಂದ್ರನಾಥ ರೈಯವರು ಬಳ್ಳಮಜಲುಗುತ್ತು ಕುಟುಂಬದ ಯಜಮಾನರಾಗಿದ್ದು, ಪುತ್ತೂರು ತಾಲೂಕು ಅಡಿಕೆ ವರ್ತಕರ ಸಂಘದ ಅಧ್ಯಕ್ಷರಾಗಿದ್ದಾರೆ. ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ನಾರಾಯಣ ರೈ ಕುಕ್ಕುವಳ್ಳಿ ಅವರು 36 ವರ್ಷ ಶಿಕ್ಷಕರಾಗಿದ್ದರು. ಪ್ರಸ್ತುತ ಲೇಖಕರಾಗಿದ್ದಾರೆ. ಉಮಾಪ್ರಸಾದ್ ರೈ ನಡುಬೈಲು 32 ವರ್ಷಗಳಿಂದ ವರದಿಗಾರರಾಗಿದ್ದು, 25 ವರ್ಷದಿಂದ ಸುದ್ದಿ ಬಿಡುಗಡೆ ವರದಿಗಾರರಾಗಿದ್ದಾರೆ.



















































































































