ಲೋಕಾಯುಕ್ತದ ಆರು ವರ್ಷಗಳ ಅನುಭವದಲ್ಲಿ ಅನ್ಯಾಯದ ಬಗ್ಗೆ ತಿಳಿದುಕೊಂಡೆ. ಇದಕ್ಕೆ ವ್ಯಕ್ತಿಗಳಲ್ಲ ಸಮಾಜ ಮೂಲ ಕಾರಣ ಎಂದು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ ಅವರು ಹೇಳಿದರು. ಅವರು ರವಿವಾರ ಬಂಟರ ಸಂಘ ಬಜಪೆ ವಲಯದ ಆಶ್ರಯದಲ್ಲಿ ಮುಂಡಾರು ತಾರಿಕಂಬ್ಳದಲ್ಲಿ ನಡೆದ ನೂತನ ಅಧ್ಯಕ್ಷ ಕರಂಬಾರು ಪಡುಮನೆ ವೇಣುಗೋಪಾಲ್ ಎಲ್ ಶೆಟ್ಟಿ ಅವರ ಪದಗ್ರಹಣ ಕಾರ್ಯಕ್ರಮ, ರಾಷ್ಟ್ರೀಯ ಬಂಟರ ಸಂಘಗಳ ಸಾಂಸ್ಕೃತಿಕ ಸ್ಪರ್ಧೆ, ಪಾಲ್ದಟ್ಟೆಡ್ ಬಂಟೆರೆ ಪರ್ಬ – 2025ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸನ್ಮಾನಗಳಿಂದ ಸಮಾಜದಲ್ಲಿ ಶಾಂತಿ, ಸೌಹಾರ್ದ, ಗೌರವ ಹೆಚ್ಚಾಗುತ್ತದೆ. ಕಾನೂನು ಚೌಕಟ್ಟಿನಲ್ಲಿ ಶ್ರೀಮಂತರಾಗಬೇಕು. ಮಕ್ಕಳಲ್ಲಿ ತೃಪ್ತಿ ಹಾಗೂ ಮಾನವೀಯತೆ ಬೆಳೆಸಿದರೆ ಶಾಂತಿ ಸೌಹಾರ್ದದಿಂದ ಪ್ರಗತಿ ಸಾಧ್ಯ ಎಂದರು. ಆಳ್ವಾಸ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಹಾಗೂ ಎಮ್.ಆರ್.ಜಿ ಗ್ರೂಪ್ ಬೆಂಗಳೂರು ಇದರ ಸಿಎಂಡಿ ಡಾ| ಕೆ ಪ್ರಕಾಶ್ ಶೆಟ್ಟಿ ಅವರನ್ನು ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ ಅವರು ಸನ್ಮಾನಿಸಿದರು.

ಡಾ| ಕನ್ಯಾನ ಸದಾಶಿವ ಶೆಟ್ಟಿಯವರು ದೀಪ ಪ್ರಜ್ವಲನೆಗೈದರು. ಕುಸುಮೋಧರ ಡಿ ಶೆಟ್ಟಿಯವರು ಬಜಪೆ ಬಂಟರ ಭವನದ ನೀಲ ನಕ್ಷೆಯನ್ನು ಬಿಡುಗಡೆಗೊಳಿಸಿದರು. ವಿದ್ಯಾನಿಧಿಯನ್ನು ಶಶಿಧರ ಶೆಟ್ಟಿ ಬರೋಡ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘ ಬಜಪೆ ವಲಯದ ಅಧ್ಯಕ್ಷ ವೇಣುಗೋಪಾಲ್ ಎಲ್ ಶೆಟ್ಟಿ ಕರಂಬಾರು ಪಡುಮನೆ ಅವರು ವಹಿಸಿದ್ದರು. ಆಸರೆ ಯೋಜನೆಯ ಫಲಾನುಭವಿಗಳಿಗೆ ಪ್ರವೀಣ್ ಭೋಜ ಶೆಟ್ಟಿ ಅವರು ಸಹಾಯಧನ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಶಾಸಕ ರಾಜೇಶ್ ನಾಯ್ಕ್, ಪುಣೆ ಬಂಟರ ಸಂಘದ ಅಧ್ಯಕ್ಷ ಕೆ ಅಜಿತ್ ಹೆಗ್ಡೆ, ಮುಲುಂಡ್ ಬಂಟರ ಸಂಘದ ಅಧ್ಯಕ್ಷ ಸಿಎ ಕರುಣಾಕರ ಶೆಟ್ಟಿ, ಥಾಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಎಂ ಶೆಟ್ಟಿ, ಉದ್ಯಮಿ ಮುಂಡಪ್ಪ ಪಯ್ಯಡೆ, ಯೂನಿವರ್ಸಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್ ಉಪೇಂದ್ರ ಶೆಟ್ಟಿ, ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು, ತುಂಗಾ ಆಸ್ಪತ್ರೆಯ ಆಡಳಿತ ನಿರ್ದೇಶಕ ರಾಜೇಶ್ ಶೆಟ್ಟಿ, ಸತೀಶ್ ಶೆಟ್ಟಿ ಪಟ್ಲಗುತ್ತು, ಉದ್ಯಮಿ ಶಿವರಾಮ್ ಶೆಟ್ಟಿ ಗಂಡಬೆಟ್ಟು, ಉದ್ಯಮಿ ಕುಶಾಲ್ ಸಿ ಭಂಡಾರಿ ಐಕಳಬಾವ, ಸಿಎ ಸುದೇಶ್ ರೈ, ಉದ್ಯಮಿ ವಿಜಯ ಆರ್ ಭಂಡಾರಿ, ಶ್ರೀಮತಿ ಉಮಾಕೃಷ್ಣ ಶೆಟ್ಟಿ, ಉದ್ಯಮಿ ಡಾ| ಅರುಣೋದಯ ರೈ ಬಿಳಿಯೂರು ಗುತ್ತು, ಬಜಪೆ ಬಂಟರ ಸಂಘದ ಗೌರವಾಧ್ಯಕ್ಷ ವಿಜಯನಾಥ ವಿಠಲ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಅಜಿತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು. ಮಹೇಶ್ ಶೆಟ್ಟಿ ವಂದಿಸಿದರು.

















































































































