ಬಜಪೆ ಬಂಟರ ಸಂಘದ ಯುವಕರ ಹಾಗೂ ಹಿರಿಯರ ನಿರಂತರ ಪ್ರಯತ್ನ ಪರಿಶ್ರಮ ಇಂದಿನ ಈ ಕಾರ್ಯಕ್ರಮವಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು. ಅವರು ರವಿವಾರ ಮುಂಡಾರು ತಾರಿಕಂಬ್ಳದ ಬಂಟರ ಸಂಘ ಬಜಪೆ ವಲಯದ ಮೈದಾನದಲ್ಲಿ ಬಂಟರ ಸಂಘ ಬಜಪೆ ವಲಯದ ಆಶಯದಲ್ಲಿ ನಡೆದ ರಾಷ್ಟ್ರೀಯ ಬಂಟರ ಕಲಾ ವೈಭವ, ನೂತನ ಅಧ್ಯಕ್ಷ ಕರಂಬಾರು ಪಡುಮನೆ ವೇಣುಗೋಪಾಲ ಎಲ್ ಶೆಟ್ಟಿ ಅವರ ಪದಗ್ರಹಣ ಸಮಾರಂಭ, ರಾಷ್ಟ್ರೀಯ ಬಂಟರ ಸಂಘಗಳ ಸಾಂಸ್ಕೃತಿಕ ಸ್ಪರ್ಧೆ ಪಾಲ್ದಟ್ಟೆಡ್ ಬಂಟೆರೆ ಪರ್ಬ 2025 ಕಾರ್ಯಕ್ರಮದಲ್ಲಿ ಮಾತನಾಡಿದರು. ವೇಣುಗೋಪಾಲ್ ಎಲ್ ಶೆಟ್ಟಿ ಅವರನ್ನು ಅಧ್ಯಕ್ಷ ಮಾಡುವ ಇಲ್ಲಿನ ಬಂಟರ ಪ್ರಯತ್ನ ಇಂದು ಸಾಕಾರಗೊಂಡಿದೆ. ಸಂಘ ಸಂಸ್ಥೆಯಲ್ಲಿ ಸಣ್ಣ ಸಣ್ಣ ಭಿನ್ನಮತ ಇದ್ದದ್ದೆ. ಅವುಗಳನ್ನು ಪರಿಹಾರ ಮಾಡಿ ಸಹಮತ ಏಕತೆಯ ಮೂಲಕ ಕಾರ್ಯವೆಸಗಬೇಕು ಎಂದು ಅವರು ಹೇಳಿದರು.

ಪುಣೆ ಬಂಟರ ಸಂಘದ ಅಧ್ಯಕ್ಷ ಅಜಿತ್ ಹೆಗ್ಡೆ ಕೆಂಜಾರು ಗುತ್ತು, ಮುಡಾರೆ ಫೌಂಡೇಶನ್ ಅಧ್ಯಕ್ಷ ಸತೀಶ್ ಆಳ್ವ, ಉದ್ಯಮಿ ಗಣೇಶ್ ಬಾಳಿಗ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಅಕ್ಷಯ ಆರ್ ಶೆಟ್ಟಿ ಅವರಿಗೆ ಗೌರವ ಅಭಿನಂದನೆ ಕಾರ್ಯಕ್ರಮ ನಡೆಯಿತು. ಐಕಳ ಹರೀಶ್ ಶೆಟ್ಟಿ ಅವರನ್ನು ಬಂಟರ ಸಂಘ ಬಜಪೆ ವಲಯದಿಂದ ಸನ್ಮಾನಿಸಲಾಯಿತು. ಶಾಸಕರಾದ ಉಮಾನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ ಮಾತನಾಡಿದರು. ನೂತನ ಅಧ್ಯಕ್ಷ ಕರಂಬಾರು ಪಡುಮನೆ ವೇಣುಗೋಪಾಲ ಎಲ್ ಶೆಟ್ಟಿ ಮಾತನಾಡಿ, ಎಲ್ಲರ ಸಹಕಾರ ಸದಾ ಬೇಕು. ಎಲ್ಲರೂ ಒಗ್ಗಟ್ಟಿನಿಂದ ಮುಂದಿನ ಉದ್ದೇಶ ಕಾರ್ಯಗಳನ್ನು ಮಾಡುವ ಎಂದು ಹೇಳಿದರು. ಬಂಟರ ಸಂಘ ಭಜಪೆ ವಲಯದ ಗೌರವಾಧ್ಯಕ್ಷ ವಿಜಯನಾಥ ವಿಠಲ ಶೆಟ್ಟಿ ಧ್ವಜಾರೋಹಣಗೈದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ತಾಲೂಕು ಬಂಟರ ಸಂಘದ ಅಧ್ಯಕ್ಷ ರವಿರಾಜ ಶೆಟ್ಟಿ ನಿಟ್ಟೆ ಗುತ್ತು, ಕಟೀಲು ಮೇಳದ ಯಜಮಾನ ದೇವಿ ಪ್ರಸಾದ ಶೆಟ್ಟಿ ಕಲ್ಲಾಡಿ, ಉದ್ಯಮಿ ಶಿವರಾಮ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್ ಶೆಟ್ಟಿ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟಿನ ಕಾರ್ಯಾಧ್ಯಕ್ಷ ದೇವಿಚರಣ್ ಶೆಟ್ಟಿ, ನಗ್ರಿಗುತ್ತು ವಿವೇಕ್ ಶೆಟ್ಟಿ, ಅಜಯ್ ದೀಕ್ಷಿತ್ ಶೆಟ್ಟಿ, ಡಾ. ಪ್ರಶಾಂತ್ ಮಾರ್ಲ, ಮಹಿಳಾ ವಿಭಾಗದ ಮಲ್ಲಿಕಾ ವರಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು. ಸುಕೇಶ್ ಮಾಣಯಿ ವಂದಿಸಿದರು.

















































































































