ಕ್ಲಾಟ್ ಒಕ್ಕೂಟವು ಡಿಸೆಂಬರ್ 7ರಂದು ನಡೆಸಿದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಕ್ಲಾಟ್) 2025 ರಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 11 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆಳ್ವಾಸ್ನ ದರ್ಶನ್ ಹೆಚ್.ಜೆ, ಮಧು, ರಕ್ಷಾ ಕೆ, ರಾಜ್ದೀಪ್ ಎಸ್ ನಾಯಕ್, ಕುಂದನಿಕ ಗೌಡ, ಭೂಮಿ, ಗೌರಿ ಎಸ್ ಪಾಟೀಲ್, ಅರ್ವಿನ್, ಅನನ್ಯ ಡಿ, ಅನ್ನಾ ಲಹರಿ, ಮಿಥಾಲಿ ನಾಯ್ಕ ಕ್ಲಾಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಪ್ರಾಚಾರ್ಯ ಮಹಮ್ಮದ್ ಸದಾಕತ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಮ್.ಡಿ ಅಭಿನಂದಿಸಿದ್ದಾರೆ.



















































































































