ಜೆಸಿಐ ಭಾರತ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿ ಔಟ್ ಸ್ಟ್ಯಾಂಡಿಂಗ್ ಡಿಜಿಟಲ್ ಇನ್ಫ್ಲುಯೆನ್ಸರ್ ಅವಾರ್ಡ್ ಗೆ (OUTSTANDING DIGITAL INFLUENCER AWARD) ಕಾರ್ಕಳದಿಂದ ಜೇಸಿಯೇತರ ವಿಭಾಗದಲ್ಲಿ ನಾಮಿನಿ ಆಗಿ ಜಿಸಿಐ ಶಾಲಾ ಶಿಕ್ಷಕಿ ವಂದನಾ ರೈ ಕಾರ್ಕಳ ಇವರು ಭಾಜನರಾಗಿದ್ದಾರೆ. ಜಿಸಿಐ ಭಾರತವು ರಾಷ್ಟ್ರಮಟ್ಟದಲ್ಲಿ ಐವರಿಗೆ ಈ ಪ್ರಶಸ್ತಿ ಘೋಷಿಸಿದ್ದು, ಅವರಲ್ಲಿ ವಂದನಾ ರೈಯವರು ಕೂಡಾ ಓರ್ವರು. ಸಾಮಾಜಿಕ ಜಾಲತಾಣಗಳಲ್ಲಿ ವಿಷಯಗಳ ಪರಿಕಲ್ಪನೆಗಳು, ಅತೀ ಹೆಚ್ಚು ಫಾಲೋವರ್ಸ್ ಹಾಗೂ ವೀಡಿಯೋಗಳ ಅತೀ ಹೆಚ್ಚಿನ ವೀಕ್ಷಣೆ ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಡಿಸೆಂಬರ್ 27ರಿಂದ 29 ರವರೆಗೆ ಚೆನ್ನೈಯಲ್ಲಿ ನಡೆಯಲಿರುವ ಜೆಸಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ಹಸ್ತಾಂತರ ಮಾಡಲಾಗುವುದು ಎಂದು ಜೆಸಿಐ ಭಾರತ ಪ್ರಕಟಣೆಯಲ್ಲಿ ತಿಳಿಸಿದೆ.

















































































































