ಪ್ರಪಂಚದಾದ್ಯಂತ ನಿರೀಕ್ಷೆ ಮೂಡಿಸಿರುವ ಬಂಟ್ಸ್ ನೌ ಚಾನೆಲ್ ಗುರುವಾರ (ಡಿಸೆಂಬರ್ 11) ಲೋಕಾರ್ಪಣೆಗೊಂಡಿತು. ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಚಾನೆಲ್ ಲೋಕಾರ್ಪಣೆ ಮಾಡಿದರು. ಬಂಟ್ಸ್ ನೌ ದೇಶಾದ್ಯಂತ ಮನೆ ಮಾತಾಗಿರುವ ಸಂಸ್ಥೆ. ಸುದ್ದಿ ಜಗತ್ತಿನಲ್ಲಿ ಹೊಸ ಹೊಸ ಪ್ರಯೋಗಗಳು, ವಿಭಿನ್ನ ಮತ್ತು ವಿಶೇಷ ವಸ್ತುನಿಷ್ಠ ಕಾರ್ಯಕ್ರಮಗಳ ಮೂಲಕ ಜನರ ನಂಬಿಕೆಗೆ ಪಾತ್ರವಾಗಿದೆ. ಈಗಾಗಲೇ ಮಂಗಳೂರಿನಲ್ಲಿ ಬಂಟ್ಸ್ ನೌ ಡಿಜಿಟಲ್ ಮಾಧ್ಯಮ ಆರಂಭವಾಗಿ ಹದಿನಾರು ವರ್ಷ ಕಳೆದಿದ್ದು, ಬಂಟ ಸಮಾಜದ ಮೂವರು ಮಹಾನ್ ದಾನಿಗಳ ಸಹಕಾರದಿಂದ ಈಗ ಚಾನೆಲ್ ಲೋಕಾರ್ಪಣೆಯಾಗಿ ಎಲ್ಲರ ಮನೆಮನಗಳಿಗೆ ಬರಲಿವೆ. ಚಾನೆಲ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾಧ್ಯಮ ಸಂಸ್ಥೆಯ ಸ್ಥಾಪಕ ಆರ್ ವಿ ಶೆಟ್ಟಿ, ಸುಕೇಶ್ ಭಂಡಾರಿ, ಉಮೇಶ್ ಶೆಟ್ಟಿ, ಮೋಹನ್ ಶೆಟ್ಟಿ, ರವಿರಾಜ್ ರೈ, ನೇಮಿರಾಜ್ ಶೆಟ್ಟಿ, ದಿನಕರ್ ರೈ ಹಾಗೂ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.















































































































