ಶ್ರೀಮತಿ ನಾಗರತ್ನ ದಯಾನಂದ ಶೆಟ್ಟಿ ಇವರ ನೆನಪಿನಲ್ಲಿ ನವೆಂಬರ್ 21 ರಂದು ಹೇರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀಮತಿ ಮತ್ತು ಶ್ರೀ ಸಿಎ ಜೀವನ್ ಕುಮಾರ್ ಶೆಟ್ಟಿ ಪಟೇಲರ ಮನೆ ಹೇರೂರು ಇವರು ಸೇವಾ ರೂಪದಲ್ಲಿ ನೂತನವಾಗಿ ನಿರ್ಮಿಸಿರುವ “ಶ್ರೀಮತಿ ನಾಗರತ್ನ ದಯಾನಂದ ಶೆಟ್ಟಿ ಸಭಾಂಗಣ” ಇದರ ಉದ್ಘಾಟನೆಯನ್ನು ಶ್ರೀ ಕೆ ಜಯಪ್ರಕಾಶ್ ಹೆಗ್ಡೆ (ಮಾಜಿ ಸಚಿವರು ಕರ್ನಾಟಕ ಸರಕಾರ) ಹಾಗೂ ಶ್ರೀ ಎಚ್ ದಯಾನಂದ ಶೆಟ್ಟಿ ಪಟೇಲರ ಮನೆ ಹೇರೂರು ಇವರು ಜೊತೆಗೂಡಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಮತ್ತು ಶ್ರೀ ಸಿಎ ಜೀವನ್ ಕುಮಾರ್ ಶೆಟ್ಟಿ ದಂಪತಿಗಳು, ದೇವಸ್ಥಾನದ ಪ್ರಧಾನ ಅರ್ಚಕರಾದ ಆನಂದ ಭಟ್, ಅನುವಂಶಿಕ ಮೊಕ್ತೇಸರರಾದ ಮಂದರ ಶೆಟ್ಟಿ, ಸುನಿಲ್ ಸೂಡ ದೊಡ್ಡಮನೆ, ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಶೆಟ್ಟಿ ಬಡಾಮನೆ, ಉದ್ಯಮಿ ಶ್ರೀ ಚೇತನ್ ಕುಮಾರ್ ಶೆಟ್ಟಿ ಹೇರೂರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.












































































































