ಬೆಳ್ತಂಗಡಿಯ ಆರಂಬೋಡಿ ಗ್ರಾಮದ ಹಕ್ಕೇರಿ ಕಂಬಳದಡ್ಡ ದಿವಂಗತ ಲಿಂಗಪ್ಪ ಶೆಟ್ಟಿ ಮತ್ತು ಶ್ರೀಮತಿ ಸಂಪಾ ಶೆಟ್ಟಿಯವರ ಸುಪುತ್ರಿ ಕುಮಾರಿ ಸುರಕ್ಷಾ ಶೆಟ್ಟಿಯವರು ಚಾರ್ಟರ್ಡ್ ಅಕೌಂಟೆಂಟ್ (CA) ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರು ಪ್ರಸ್ತುತ ಬೆಂಗಳೂರಿನ CAGK ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಭವಿಷ್ಯದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಲಿ ಎಂದು ಹಾರೈಸೋಣ.










































































































