ಮಾಸಿಕ ಚಕ್ರವು ಮಹಿಳೆಯ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಮೊದಲ ಋತು ಚಕ್ರ ದಿಂದ ಶುರುವಾಗಿ ಋತು ಬಂಧದವರೆಗೆ ಇದು ಜೀವನದ ಅವಿಭಾಜ್ಯ ಅಂಗ. ಆದರೆ ಮಾಸಿಕ ಚಕ್ರ ಅಸಮಂಜಸವಾಗಿ, ವಿಳಂಬವಾಗಿ, ಅತಿಯಾದ ಪ್ರಮಾಣದಲ್ಲಿ ಅಥವಾ ಸಂಪೂರ್ಣ ನಿಂತಾಗ , ಅದು ಮಹಿಳೆಗೆ ಶಾರೀರಿಕವಾಗಿಯೂ ಮಾನಸಿಕವಾಗಿಯೂ ಬಹಳ ಕಿರಿಕಿರಿ ಯನ್ನು ಉಂಟುಮಾಡುತ್ತದೆ. ಅಂತಹ ಒಂದು ಸಾಮಾನ್ಯ ಸಮಸ್ಯೆ ಎಂದರೆ PCOD – ಪಾಲಿ ಸಿಸ್ಟಿಕ್ ಓವರಿಯನ್ ಡಿಸೀಸ್. ಇಲ್ಲಿ ಅಂಡಾಶಯದ ಹಲವು ಸಿಸ್ಟ್ಗಳು (ದ್ರವ ತುಂಬಿದ ಗುಳ್ಳೆಗಳು ) ಕಂಡುಬರುತ್ತವೆ. ಹಾರ್ಮೋನ್ಗಳ ಅಸಮತೋಲನದಿಂದ ಇದು ಉಂಟಾಗುತ್ತದೆ. ಇದರ ಪ್ರಮುಖ ಲಕ್ಷಣಗಳು – ಮಾಸಿಕ ನಿಲ್ಲುವುದು (ಅಮೆನೋರಿಯಾ), ದೇಹದ ಮೇಲೆ ಹೆಚ್ಚುವರಿ ಕೂದಲು ಬೆಳವಣಿಗೆ (ಹಿರ್ಸುಟಿಸಮ್), ದೇಹದ ತೂಕ ಹೆಚ್ಚಾಗುವುದು ಮತ್ತು ಅಂಡಾಶಯ ದೊಡ್ಡದಾಗಿರುವುದು.

ಹಾರ್ಮೋನ್ಗಳು ಯಾವುವು?
PCOD ಯಲ್ಲಿ ಏನಾಗುತ್ತದೆ? PCOD ಯಲ್ಲಿ ಆಂಡ್ರೋಜನ್ (ಪುರುಷ ಹಾರ್ಮೋನ್) ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದರಿಂದ ಅಂಡಾಣು ಬಿಡುಗಡೆ ಪ್ರಕ್ರಿಯೆ ಯಲ್ಲಿ ಏರುಪೇರಾಗಿ ಗರ್ಭಧಾರಣೆ ಕಷ್ಟವಾಗುತ್ತದೆ. ಉಪಚಾರವಿಲ್ಲದೆ ದೀರ್ಘಕಾಲ PCOD ಇದ್ದರೆ ದೇಹದ ತೂಕ ಹೆಚ್ಚುವುದು, ಇನ್ಸುಲಿನ್ ಸಂವೇದನೆ ಕಮ್ಮಿ ಆಗುವುದು ಮತ್ತು ನಂತರ ಮಧುಮೇಹ (ಡಯಾಬಿಟೀಸ್) ಬೆಳೆಯುವ ಸಾಧ್ಯತೆ ಇರುತ್ತದೆ.
PCOD ನ ಪ್ರಮುಖ ಲಕ್ಷಣಗಳು
• ಮಾಸಿಕ ಚಕ್ರ ವಿಳಂಬವಾಗುವುದು, ಅಸಮಂಜಸವಾಗುವುದು ಅಥವಾ ಪ್ರಮಾಣ ಕಡಿಮೆ ಇರುವುದು • ಮುಖ ಮತ್ತು ದೇಹದ ಮೇಲೆ ಹೆಚ್ಚುವರಿ ಕೂದಲು ಬೆಳೆಯುವುದು • ತಲೆಯ ಕೂದಲು ಉದುರುವುದು, ಕಡಿಮೆಯಾಗುವುದು • ದೇಹದ ತೂಕ ಹೆಚ್ಚಾಗುವುದು • ಮೊಡವೆಗಳು ಕಾಣಿಸಿಕೊಳ್ಳುವುದು • ಮಾನಸಿಕ ಅಸ್ಥಿರತೆ, ಬೇಸರ, ದುಗುಡ, ಖಿನ್ನತೆ ಇತ್ಯಾದಿ. • ಗರ್ಭಧಾರಣೆಯಲ್ಲಿ ತೊಂದರೆ
PCOD ಯನ್ನು ಹೇಗೆ ಪತ್ತೆಹಚ್ಚುತ್ತಾರೆ?
ವೈದ್ಯರು ಸಾಮಾನ್ಯವಾಗಿ ಕೆಳಗಿನ ಪರೀಕ್ಷೆಗಳನ್ನು ಮಾಡುತ್ತಾರೆ: • ಆರೋಗ್ಯ ಇತಿಹಾಸ, ಮಾಸಿಕ ಚಕ್ರದ ಮಾಹಿತಿ, ಹಾಗೂ ನಿಮ್ಮ ಲಕ್ಷಣಗಳ ಬಗ್ಗೆ ಪ್ರಶ್ನಿಸುತ್ತೇವೆ. • ದೇಹಪರಿಶೀಲನೆ ಮಾಡಿ, ಹೆಚ್ಚುವರಿ ಕೂದಲು, ರಕ್ತದ ಒತ್ತಡ ಇತ್ಯಾದಿ ಪರಿಶೀಲಿಸುತ್ತೇವೆ. . • ರಕ್ತ ಪರೀಕ್ಷೆ ಮೂಲಕ ಶರೀರದ ಸಕ್ಕರೆ, ಇನ್ಸುಲಿನ್ ಹಾಗೂ ಹಾರ್ಮೋನ್ ಮಟ್ಟಗಳನ್ನು ಪರೀಕ್ಷಿಸು ತ್ತೇವೆ • ಕೆಲವು ಸಂದರ್ಭಗಳಲ್ಲಿ ಓವರಿಯಲ್ಲಿ ನೀರುಗುಳ್ಳೆ ಗಳಿರುವುದನ್ನು ನೋಡಲು ಅಲ್ಟ್ರಾಸೌಂಡ್ ಮಾಡಬಹುದು.
ಆಹಾರ ಮತ್ತು ಜೀವನಶೈಲಿ ನಿರ್ವಹಣೆ
PCOD ನ ನಿಯಂತ್ರಣಕ್ಕೆ ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಮತ್ತು ತೂಕ ನಿಯಂತ್ರಣ ಅತ್ಯಂತ ಮುಖ್ಯ. ಕೆಳಗಿನ ಆಹಾರಗಳನ್ನು ಸಾಧ್ಯವಾದಷ್ಟು ತಪ್ಪಿಸಬೇಕು: • ಫಾಸ್ಟ್ಫುಡ್, ಪೇಸ್ಟ್ರಿಗಳು, ಅತಿಯಾದ ಎಣ್ಣೆಯ ಆಹಾರ • ಬಿಳಿ ಅಕ್ಕಿ, ಬಿಳಿ ಸಕ್ಕರೆ, ಮೈದಾ ಪದಾರ್ಥಗಳು • ಬ್ರಾಯ್ಲರ್ ಕೋಳಿ ಮಾಂಸ ಹಣ್ಣು, ತರಕಾರಿ, ಹೋಲ್ ಗ್ರೇನ್ ಆಹಾರ, ಸಾಕಷ್ಟು ನೀರು ಸೇವನೆ ಹಾಗೂ ನಿಯಮಿತ ವ್ಯಾಯಾಮದಿಂದ PCOD ನಿಯಂತ್ರಣ ಸಾಧ್ಯ.
ಹೋಮಿಯೋಪಥಿ ಚಿಕಿತ್ಸೆ
ಹೋಮಿಯೋಪಥಿಯಲ್ಲಿ ಪ್ರತಿಯೊಬ್ಬರಿಗೂ ವೈಯಕ್ತಿಕ ರೀತಿಯಲ್ಲಿ ಔಷಧಿ ನೀಡಲಾಗುತ್ತದೆ. PCOD ಎಲ್ಲರಲ್ಲೂ ಒಂದೇ ಕಾರಣದಿಂದ ಬರುವುದಿಲ್ಲ – ಕೆಲವರಿಗೆ ಮಾನಸಿಕ ಒತ್ತಡದಿಂದ, ಕೆಲವರಿಗೆ ತೂಕ ಹೆಚ್ಚುವಿಕೆ ಕಾರಣದಿಂದ, ಕೆಲವರಿಗೆ ವಂಶಪಾರಂಪರ್ಯದಿಂದ. ವೈದ್ಯರು ನಿಮ್ಮ ಸಂಪೂರ್ಣ ಪ್ರಕರಣವನ್ನು ವಿವರವಾಗಿ ಕೇಳಿ, ಲಕ್ಷಣಗಳ ಆಧಾರದ ಮೇಲೆ ವೈಯಕ್ತಿಕ ಔಷಧಿ ನೀಡಿ ಚಿಕಿತ್ಸೆ ಮಾಡುತ್ತಾರೆ. ಸರಿಯಾದ ಹೋಮಿಯೋಪಥಿ ಚಿಕಿತ್ಸೆ PCOD ನ ಮೂಲವನ್ನು ಸರಿಪಡಿಸಲು ಸಹಕಾರಿಯಾಗುತ್ತದೆ.
ಸಾರಾಂಶ
PCOD ಒಂದು ಸಾಮಾನ್ಯ ಆದರೆ ನಿರ್ಲಕ್ಷಿಸಬಾರದ ಸಮಸ್ಯೆ. ಸರಿಯಾದ ನಿರ್ವಹಣೆ, ಆಹಾರ-ವ್ಯಾಯಾಮ ಮತ್ತು ಹೋಮಿಯೋಪಥಿ ಚಿಕಿತ್ಸೆಯಿಂದ ಹಾರ್ಮೋನ್ ಸಮತೋಲನ ಪುನಃಸ್ಥಾಪಿಸಿ ಆರೋಗ್ಯಕರ ಜೀವನ ನಡೆಸಬಹುದು.
✍️ ಲೇಖಕಿ
ಡಾ. ನಿವೇದಿತಾ ಪಿ. ರೈ, BHMS MD
ಡಾ. ರೈ ಹೋಮಿಯೋಪಥಿ ಸೆಂಟರ್, ಬೆಂದೂರವೆಲ್, ಮಂಗಳೂರು
📱 ಮೊಬೈಲ್: 8123870254