ಬಂಟ್ವಾಳ ತಾಲೂಕು ಬಂಟರ ಸಂಘದ ವಿಂಶತಿ ಸಂಭ್ರಮವು ಮೇ 25 ರಂದು ಬಂಟವಾಳದ ಬಂಟರ ಭವನ ತುಂಬೆ ಇಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ ಡಿ ಶೆಟ್ಟಿ ರಂಗೋಲಿ ಇವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರನ್ನು ಅದ್ದೂರಿಯಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಆಳ್ವಾಸ್ ಸಂಸ್ಥೆಯ ಡಾ. ಮೋಹನ್ ಅಳ್ವ, ಶಶಿಧರ್ ಶೆಟ್ಟಿ ಬರೋಡ, ಪ್ರವೀಣ್ ಶೆಟ್ಟಿ ವಕ್ವಾಡಿ, ಕರ್ನಿರೆ ವಿಶ್ವನಾಥ್ ಶೆಟ್ಟಿ, ಕಿಶನ್ ಶೆಟ್ಟಿ, ಡಾ. ಪ್ರಶಾಂತ್ ಮಾರ್ಲ, ಜಗನ್ನಾಥ್ ಚೌಟ, ಲೋಕೇಶ್ ಶೆಟ್ಟಿ, ಅಶೋಕ್ ಪಕ್ಕಳ ಮತ್ತಿತರು ಉಪಸ್ಥಿತರಿದ್ದರು.
