ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಕುಂದಾಪುರ ತಾಲೂಕು, ಸಮಿತಿ ಮತ್ತು ಕುಂದಾಪುರ ತಾಲೂಕು ಮಹಿಳಾ ವಿಭಾಗ ಇವರ ಸಹಭಾಗಿತ್ವದಲ್ಲಿ ಪ್ರತಿ ಹುಣ್ಣಿಮೆಯಂದು ನಡೆಯುವ ‘ಸಾಮೂಹಿಕ ಸತ್ಯನಾರಾಯಣ ಪೂಜೆ’ ಬಂಟರ ಯಾನೆ ನಾಡವರ ಸಂಕೀರ್ಣದ ಎಸ್. ಎಸ್. ಹೆಗ್ಡೆ ಸಭಾ ಭವನದಲ್ಲಿ ಜರಗಿತು. ಸೇವಾಕರ್ತರಾದ ಉದ್ಯಮಿ ದಂಪತಿ ಮರಾತೂರು ಹೊಸಿಮನೆ ಶ್ಯಾಮಲ ಶೆಟ್ಟಿ ಮತ್ತು ಜಯರಾಮ ಶೆಟ್ಟಿ ಅವರಿಂದ ನೆರವೇರಿಸಲಾಯಿತು.

ಸೇವಾಕರ್ತರನ್ನು ಸಮಾಜದ ಹಿರಿಯರಾದ ಅಮೃತ ರಾಧಾ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷೆ ಆಶಾ ಶಿವರಾಮ ಶೆಟ್ಟಿ, ಮಹಿಳಾ ಸಂಘದ ಅಧ್ಯಕ್ಷೆ ಹೇಮಾವತಿ ಹೆಗ್ಡೆ ಅವರು ಸಮ್ಮಾನಿಸಿದರು. ಸಮಾಜದ ಜನರಿಗೆ ವೈದ್ಯಕೀಯ ನೆರವಿಗೆ ತಾಲೂಕು ಸಮಿತಿ ವತಿಯಿಂದ ಸಹಾಯ ಧನ ನೀಡಲಾಯಿತು.ಬಂಟರ ಯಾನೆ ನಾಡವರ ಮಾತೃ ಸಂಘ ಕುಂದಾಪುರ ತಾಲೂಕು ಸಮಿತಿಯ ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ ಕಾವ್ರಾಡಿ ಸ್ವಾಗತಿಸಿ, ಪ್ರಸ್ತಾವಿಸಿದರು. ಕುಂದಾಪುರ ತಾಲೂಕು ಸಮಿತಿ ಸಹ ಸಂಚಾಲಕ ಅಶೋಕ್ ಶೆಟ್ಟಿ ಸಂಸಾಡಿ, ಕುಂದಾಪುರ ತಾಲೂಕು ಮಹಿಳಾ ಸಂಘದ ಸದಸ್ಯೆಯರು, ಬೈಂದೂರು ಬಂಟರ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಸಾಲ್ಗದ್ದೆ, ಕುಂದಾಪುರ ಯುವ ಬಂಟರ ಸಂಘದ ಸ್ಥಾಪಕ ಅಧ್ಯಕ್ಷ ಡಾ| ನಿತ್ಯಾನಂದ ಶೆಟ್ಟಿ ಅಂಪಾರು ಉಪಸ್ಥಿತರಿದ್ದರು.