ಗುಡ್ಡಮ್ಮಾಡಿ ಸೇನಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ಮತ್ತು ಶ್ರೀ ದುರ್ಗಾಪರಮೇಶ್ವರಿ ಮೂಲಸ್ಥಾನದ ಮೆಟ್ಟಿಲು ಸೇವೆ ಲೋಕಾರ್ಪಣೆ ಬಹಳ ವಿಜೃಂಭಣೆ ಯಿಂದ ನಡೆಯಿತು. ಬೆಳಿಗ್ಗೆ ಗಂಟೆ 8-00 ರಿಂದ ಗುರುಗಣಪತಿ ಪೂಜೆ, ಪ್ರಾರ್ಥನೆ, ಪುಣ್ಯಾಹ, ಸ್ನಪನಾಧಿವಾಸ ಹೋಮ, ಕಲಶ ಪೂಜೆ, ಬೆಳಿಗ್ಗೆ 10 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ಮೂಲಸ್ಥಾನದ ಮೆಟ್ಟಿಲು ಲೋಕಾರ್ಪಣೆಯನ್ನು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆಯವರು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿ ಶುಭ ಹಾರೈಸಿದರು.11.30 ಕ್ಕೆ ಶ್ರೀ ದೇವಿಯ ಮೂಲಸ್ಥಾನಕ್ಕೆ ಪೂರ್ಣಕುಂಭ ಸ್ವಾಗತದೊಂದಿಗೆ ವಿವಿಧ ಭಜನಾ ತಂಡಗಳು ವಾದ್ಯಗೋಷ್ಠಿ ಚಂಡೆ ವಾದನಗಳ ಮೂಲಕ ಭವ್ಯ ಮೆರವಣಿಗೆ ಸಾಗಿತು. ನಂತರ ಅಷ್ಠಾವಧಾನ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ ಮತ್ತು
ಮಧ್ಯಾಹ್ನ ಗಂಟೆ 12-00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ. 12-30ಕ್ಕೆ ಅನ್ನಸಂತರ್ಪಣೆ, ಸಂಜೆ ಗಂಟೆ 7ಕ್ಕೆ ಶ್ರೀ ದೇವಿಯ ಸಾನ್ನಿಧ್ಯದಲ್ಲಿ ರಂಗಪೂಜೆ, ಪ್ರಸಾದ ವಿತರಣೆ ಸಾನಿಧ್ಯದಲ್ಲಿ ಸಂಪನ್ನಗೊಂಡಿತು.ದೇವಸ್ಥಾನ ಸುತ್ತಲೂ ಹೂವಿನ ಅಲಂಕಾರ ದೀಪಾಲಂಕಾರ ಎಲ್ಲೆಂದರಲ್ಲಿ ಕಂಗೊಳಿಸುತ್ತಿತ್ತು. ಈ ಸಂದರ್ಭದಲ್ಲಿ ಬಿ ಅರುಣ್ ಕುಮಾರ್ ಶೆಟ್ಟಿ, ಚಿತ್ತರಂಜನ್ ಹೆಗ್ಡೆ ಹರ್ಕೂರು, ರೋಹಿತ್ ಶೆಟ್ಟಿ ಗುಡ್ಡಮ್ಮಾಡಿ ದೊಡ್ಮನೆ, ಅರ್ಚಕರಾದ ವಿಷ್ಣುಮೂರ್ತಿ ಐತಾಳ್, ಜಯರಾಜ್ ಹೆಗ್ಡೆ, ರಾಜಗೋಪಾಲ್ ಶೆಟ್ಟಿ ಆಡಳಿತ ಮೊಕ್ತೇಸರರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ ಗುಡ್ಡಮ್ಮಾಡಿ ಹಾಗೂ ಗುಡ್ಡಮ್ಮಾಡಿ ದೊಡ್ಡನೆ ಕುಟುಂಬಸ್ಥರು, ಸಾಲಾಡಿ ಮತ್ತು ಗುಡ್ಡಮ್ಮಾಡಿ ಕುಟುಂಬಸ್ಥರು, ಗ್ರಾಮಸ್ಥರು, ಊರ ಪರ ಊರ ಭಕ್ತವೃಂದದವರು ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ ಗುಡ್ಡಮ್ಮಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.
