ಟೀಚರ್ರು ಬುಕ್ ಹಿಡ್ಕೊಂಡ್ ಏನೋ ಹೇಳ್ಕೊಡ್ತಾ ಇದಾರೆ. ನಾವ್ ಓದುತ್ತ ಇದ್ದೇವೆ ಅನ್ನೋ ಮೈಂಡ್ ಸೆಟ್. ಓದಿದ್ವಾ.. ಪರೀಕ್ಷೆ ಬರೆದ್ವಾ… ಮಾರ್ಕ್ಸ್ ಬಂತಾ… ಅಷ್ಟೇ… ಅಷ್ಟೇ… (ಬರಿಯ ಓದಿನಿಂದ ಏನೇನೂ ಪ್ರಯೋಜನವಿಲ್ಲ ಎಂಬುದನ್ನರಿಯದ ಮಕ್ಕಳು)

ಕೌಶಲ್ಯ ಹೀನತೆ : ಸ್ಕಿಲ್ ಸೆಟ್ ಎಂಬ ಪದ ಪರಿಚಯವೇ ಇಲ್ಲದ ಅಕಾಡೆಮಿಕ್ಸ್… ತತ್ಪರಿಣಾಮವಾಗಿ ಕೌಶಲ್ಯ ಹೀನರಾಗಿ ಹೊರಬರುತ್ತಿರೋ ವಿದ್ಯಾರ್ಥಿಗಳು. (ಶಿಕ್ಷಣದಲ್ಲಿ ಯಾವುದೇ ರೀತಿಯ ಸ್ಕಿಲ್ ಸೆಟ್ ಹೇಳಿಕೊಡದ ಶಾಲಾ ಕಾಲೇಜುಗಳು. ವಿದ್ಯಾರ್ಥಿ ದೆಸೆಯಲ್ಲಿ ಯಾವುದೇ ಕೆಲಸ ಕಲಿಯಲು ಆಸಕ್ತಿ ತೋರದ. ಸದಾ ಮೊಬೈಲ್ ಉಜ್ಜಿಕೊಂಡು ಬಿದ್ದಿರುವ ಹುಡುಗರು. ಎರಡು ಕತ್ತೆ ವಯಸ್ಸಾದ್ರೂ ಅವರನ್ನು ಮಗೂ… ಮಗೂ ಅಂತ ಮುದ್ದು ಮಾಡಿಕೊಂಡೇ ಇರೋ ಪೇರೆಂಟ್ಸು ಮೂವರೂ ಸಮಾನ ದ್ರೋಹಿಗಳು)
ಗುರಿಹೀನ ಯುವಜನತೆ : ನೋ ಏಮ್ ಇನ್ ಲೈಫ್… ಕೆಲಸಕ್ಕೆ ಬಾರದ ಸರ್ಟಿಫಿಕೇಟುಗಳನ್ನು ಹಿಡಿದುಕೊಂಡು ಬರೋಬ್ಬರಿ ಇಪ್ಪತ್ತೊಂದು ವರ್ಷ ಶಾಲೆಗೆ ಮಣ್ಣು ಹೊತ್ತು ಹೊರಬಂದು ಒಂದು ಟೀ ಕಾಫಿ ತಯಾರಿಸಲು ಅರಿವಿಲ್ಲದೆ ಕೆಕರುಮಕರಾಗಿ ಅತ್ತಿತ್ತ ನೋಡುವ ಯಾವುದೇ ಕೌಶಲ್ಯವಿಲ್ಲದೇ ಊರೂರು ಅಲೆಯುತ್ತಿರುವ ಯುವಕರು. (ಯಾಕೆಂದ್ರೆ ಈಗಿನ ಹುಡುಗರಿಗೆ ಕೆಲ್ಸ ಕೊಟ್ಟು ಸಂಬಳ ಕೊಟ್ಟು ಕೆಲ್ಸ ಕಲಿಸಿ ಆಮೇಲೆ ಅವರ ಹತ್ರ ಕೆಲ್ಸ ತೆಗೀಬೇಕು. ಇದು ಕಂಪನಿಗಳ ಹಣೆಬರ)
ಇವೆಲ್ಲದರ ಎಂಡ್ ಪ್ರಾಡಕ್ಟ್ ನಿರುದ್ಯೋಗ : ಯಾವುದೇ ಸ್ಕಿಲ್ ಮೈಗೂಡಿಸಿಕೊಳ್ಳದೆ ಓದಿ ಓದಿ ಓದಿ ಕುರಿಮಂದೆಯಂತೆ ಯೂನಿವರ್ಸಿಟಿಗಳಿಂದ ಹೊರಬರುತ್ತಿರುವ ಕೋಟ್ಯಂತರ ಟೈ ಕಟ್ಟಿರೋ ಕುರಿಗಳನ್ನು ಖುದ್ದು ಭಗವಂತನೂ ಕಾಪಾಡಲಾರ. ಓದಿನ ಜೊತೆಗೆ ಮಕ್ಕಳು ಹದಿಮೂರನೇ ವಯಸ್ಸಿಗೆ ದುಡಿಮೆಗೆ ಬೀಳಬೇಕು. ದುಡ್ಡಿನ ಬೆಲೆ ಅರೀಬೇಕು. ಅವಮಾನ ತಿನ್ನಬೇಕು. ಜನರ ಜೊತೆ ಬೆರೀಬೇಕು. ಕಷ್ಟ ಕೋಟಲೆಗಳನ್ನ ಏಕಾಂಗಿಯಾಗಿ ಎದುರಿಸಿ ಕಾಲೂರಿ ನಿಂತು ಬಡಿದಾಡುವ ಕಲೆ ಒಲಿಸಿಕೊಳ್ಳಬೇಕು. ಏನು ಕೆಲಸ ಮಾಡಿದ್ರೆ ನಂಗೆ ಖುಷಿ ಸಿಗುತ್ತೆ ಅನ್ನೋದನ್ನ ಕಂಡುಕೊಳ್ಳಬೇಕು. ಅದ್ರಲ್ಲೇ ಬದುಕು ಕಟ್ಟಬೇಕು. ಇದೇ ಲೈಫ್ ಸ್ಕಿಲ್ಲು ಸ್ಕಿಲ್ಲೇ ನಮ್ಮನೆ ದೇವ್ರು…
ಬರಹ : ಧರ್ಮೇಂದ್ರ ಬೆಂಗಳೂರು