ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಹೆಸರು ವಾಸಿಯಾಗಿರುವ ಉಡುಪಿ ಮೂಲದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ ಮಾಲಕತ್ವದ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ತನ್ನ ಇತ್ತೀಚಿನ ಪಾಕಶಾಲೆಯ ಪರಿಕಲ್ಪನೆಯ ಭವ್ಯವಾದ “ಬೋಟ್ ಮ್ಯಾನ್ ಹಬ್” ಉದ್ಘಾಟನೆಯಾಗಲಿದೆ. ಎಪ್ರಿಲ್ 23 ಸಂಜೆ 7 ಗಂಟೆಗೆ ಖುಸೈಸ್ ನಾ ಫಾರ್ಚೂನ್ ಗ್ರಾಂಡ್ ಹೋಟೆಲ್ ನಲ್ಲಿ ಎಲ್ಲಾ ರೀತಿಯಲ್ಲೂ ಬಿನ್ನವಾಗಿಸಿ ವೈಶಿಷ್ಟ್ಯಮಯ ಸಮುದ್ರಹಾರ ರೆಸ್ಟೋರೆಂಟ್ ಅಧಿಕೃತ “ಬೋಟ್ ಮ್ಯಾನ್ ಹಬ್” ಕರಾವಳಿ ಭಾಗದ ಅನುಭವ ನೀಡಲಿದೆ.

ಉದ್ಯಮಿ ಡಾ. ರೊನಾಲ್ಡ್ ಕೋಲಾಸೋರವರು “ಬೋಟ್ ಮ್ಯಾನ್ ಹಬ್” ರೆಸ್ಟೋರೆಂಟ್ ನ್ನು ಉದ್ಘಾಟಿಸಲಿದ್ದಾರೆ. ಗಾಯಕಿ ಗೋವಾದ ನಟಿ ರೀಟಾ ರೋಸ್ ಮತ್ತು ಉದ್ಯಮಿ, ಸಂಘಟಕರಾದ ಸರ್ವೋತ್ತಮ ಶೆಟ್ಟಿ ಅಬುಧಾಬಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
“ಬೋಟ್ ಮ್ಯಾನ್ ಹಬ್”ರೆಸ್ಟೋರೆಂಟ್ ಮಂಗಳೂರು, ಗೋವಾ ಮತ್ತು ಮಹಾರಾಷ್ಟ್ರದ ಮಾಲ್ವನ್ ನಗರದ ಶ್ರೀಮಂತ ಕರಾವಳಿ ಸಂಪ್ರದಾಯಗಳಿಂದ ಪ್ರೇರಿತವಾಗಲಿದೆ. ಈ ಮೂರು ಪ್ರಾದೇಶಿಕ ಪಾಕ ಪದ್ದತಿಗಳ ಒಂದು ಭಕ್ಷ್ಯ ಪಟ್ಟಿ ಮತ್ಸ ಪ್ರಿಯರ ಸ್ವಾದಿಷ್ಟತೆಯ ಖಾದ್ಯಗಳನ್ನು ಆಸ್ವಾದಿಸುವರನ್ನು ಒಟ್ಟುಗೂಡಿಸಿಲಿದೆ. ಊರಿನ ವಾತಾವರಣ ಸೃಷ್ಟಿಸಿ ಸಂಪ್ರದಾಯ ಭೋಜನಗಳೊಂದಿಗೆ ಅಂತಾರಾಷ್ಟ್ರೀಯ ಶೈಲಿಯಲ್ಲಿ ಸೇವೆ ನಿರ್ವಹಿಸಲಿದೆ. ಪ್ರತಿದಿನ ಸಂಜೆ ಲೈವ್ ಡ್ಯೂಯೆಟ್ ಪ್ರದರ್ಶನಗಳು ಒಂದು ಭಾವಪೂರ್ಣ ಕಡಲತೀರದ ವಾತಾವರಣವನ್ನು ಹೊಂದಿರುತ್ತದೆ.
ಗೋವಾ ಮೂಲತಃ ಪ್ರಶಸ್ತಿ ವಿಜೇತ ಪ್ರಸಿದ್ಧ ಬಾಣಸಿಗ ಚೆಪ್ ಸರೀತಾ ಚೌವ್ಹಾಣ್ ಇವರ ಸಾರಥ್ಯದಲ್ಲಿ ಈ ರೆಸ್ಟೋರೆಂಟ್ ಗ್ರಾಹಕರಿಗೆ ಉತ್ತಮ ಸೇವೆ ನೀಡಲಿದೆ. ವಿವಿಧ ಬಗೆಯ ಮತ್ಸ್ಯಗಳ ಸವಿಯಾದ ಖಾದ್ಯಗಳ ಸ್ವಾದಿಷ್ಟ ರುಚಿಯೇ ಇಲ್ಲಿ ಗ್ರಾಹಕರನ್ನು ಸೆಳೆಯುವ ಕೇಂದ್ರವಾಗಲಿದೆ. ಫಾರ್ಚೂನ್ ಬ್ಯಾನರ್ ಅಡಿಯಲ್ಲಿ ಇಂತಹ ಪಾಕ ಪದ್ದತ್ತಿಯ ಪರಿಕಲ್ಪನೆಯು ಜೀವಂತವಾಗಿರಿಸಲು ನಾನು ಹೆಮ್ಮೆ ಪಡುತ್ತೇನೆ ಮತ್ತು ಯುಎಇಯ ಹೃದಯ ಭಾಗದಲ್ಲಿರುವ ಕರಾವಳಿ ಭಾರತವನ್ನು ಅನ್ವೇಷಿಸಲು ಬಯಸುವ ಅತಿಥಿಗಳನ್ನು ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೆವೆ ಎಂದು ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಕಾಯ್ದಿರಿಸುವಿಕೆಗಾಗಿ +971554253900
ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ, ದುಬೈ





































































































